ಶಿವಮೊಗ್ಗ:ನಗರದ ನೆಹರೂ ಕ್ರೀಡಾಂಗಣದಲ್ಲಿ ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮಕ್ಕೆ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಶಿವಮೊಗ್ಗದಲ್ಲಿ ಸಹಿ ಸಂಗ್ರಹ - ಬಿಜೆಪಿ ಶಿವಮೊಗ್ಗ ನಗರ ಯುವಮೋರ್ಚಾ
ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಅಭಿಯಾನಕ್ಕೆ ಸಹಿ ಸಂಗ್ರಹ ಅಭಿಯಾನ
ಈ ಸಂದರ್ಭದಲ್ಲಿ ನಗರದ ಯುವ ಮೋರ್ಚಾದ ದರ್ಶನ್ ಆರ್.ವಿ, ನಗರ ಅಧ್ಯಕ್ಷ ಜಗದೀಶ್ ಕೆ. ಎನ್, ನಿಕಟಪೂರ್ವ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ಬಳ್ಳೇಕೆರೆ ಸಂತೋಷ್, ಪ್ರಭಾರಿಗಳಾದ ದಿನೇಶ್ ಎನ್, ಓಬಿಸಿ ಮೋರ್ಚಾದ ಅಧ್ಯಕ್ಷ ಮಾಲತೇಶ್ ಸಿ.ಹೆಚ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಟಿ.ಆರ್, ಜಿಲ್ಲಾ ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು, ಸದಸ್ಯರುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.