ಶಿವಮೊಗ್ಗ: ಕೊರೊನಾ ಸೋಂಕಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಬೇಕೆಂದು ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರು ಹುಚ್ಚರಾಯಸ್ವಾಮಿ ದೇವರ ಮೊರೆ ಹೋಗಿದ್ದಾರೆ.
ಸಿದ್ದರಾಮಯ್ಯಗೆ ಕೊರೊನಾ: ಹುಚ್ಚರಾಯನ ಮೊರೆ ಹೋದ ಕೈ ಕಾರ್ಯಕರ್ತರು - ಕೋವಿಡ್19
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಂಎಲ್ಸಿ ಆರ್.ಪ್ರಸನ್ನ ಕುಮಾರ್ ಅವರು ಕೊರೊನಾದಿಂದ ಬೇಗ ಚೇತರಸಿಕೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥಿಸಿದರು.
ಸಿದ್ದರಾಮಯ್ಯನವರಿಗಾಗಿ ಪೂಜೆ
ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯದಲ್ಲಿ ಸಿದ್ದರಾಮಯ್ಯನವರಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಹಾಗೆಯೇ ಕಾಂಗ್ರೆಸ್ ಎಂಎಲ್ಸಿ ಆರ್.ಪ್ರಸನ್ನ ಕುಮಾರ್ ಅವರು ಸಹ ಕೊರೊನಾದಿಂದ ಬೇಗ ಗುಣಮುಖರಾಗಿ ಜನಸೇವೆಗೆ ಬರಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು. ಈ ವೇಳೆ ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಉಳ್ಳಿ, ನಾಗರಾಜ್ ಗೌಡ್ರು, ರವೀಂದ್ರ, ಸಿದ್ದಲಿಂಗೇಶ್, ಧಾರವಾಡ ಸುರೇಶ್, ಜಿದ್ದು ಮಂಜುನಾಥ್ ಹಾಗೂ ರಾಜು ಸೇರಿ ಇತರರು ಪೂಜೆಯಲ್ಲಿ ಭಾಗಿಯಾಗಿದ್ದರು.