ಕರ್ನಾಟಕ

karnataka

ETV Bharat / state

ಮದುವೆಗೆ ಬಂದ ಸಿದ್ದು ಜೊತೆ ಸೆಲ್ಫಿಗಾಗಿ ಕ್ಯೂ... ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಅಭಿಮಾನಿಗಳು! - ತರೀಕೆರೆ ಮಾಜಿ ಶಾಸಕ ಜಿ.ಎಸ್ ಶ್ರೀನಿವಾಸ್ ಮಗಳ ಮದುವೆ ಸುದ್ದಿ

ಇಂದು ಶಿವಮೊಗ್ಗದಲ್ಲಿ ನಡೆದ ತರೀಕೆರೆ ಮಾಜಿ ಶಾಸಕ ಜಿ.ಎಸ್ ಶ್ರೀನಿವಾಸ್ ಅವರ ಮಗಳ ಮದುವೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿ ,ನವದಂಪತಿಗಳಿಗೆ ಆಶೀರ್ವಾದ ಮಾಡಿದ್ರು.

siddaramaiah blessings for newly married couple
ಶಿವಮೊಗ್ಗ

By

Published : Nov 8, 2020, 3:56 PM IST

ಶಿವಮೊಗ್ಗ: ನಗರದ ಸರ್ಜಿ ಕನ್ವೇಷನ್ ಹಾಲ್​ನಲ್ಲಿ ನಡೆದ ತರೀಕೆರೆ ಮಾಜಿ ಶಾಸಕ ಜಿ.ಎಸ್ ಶ್ರೀನಿವಾಸ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ನವ ವಧುವರರಿಗೆ ಆಶೀರ್ವದಿಸಿದರು.

ಶಿವಮೊಗ್ಗ
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು:ಮದುವೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅವರ ಅಭಿಮಾನಿಗಳು ಮುಗಿಬಿದ್ರು.ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ಶಿವಮೊಗ್ಗ
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details