ಕರ್ನಾಟಕ

karnataka

ETV Bharat / state

ಸೌತ್ ಇಂಡಿಯಾ ಬ್ಯಾಂಕ್​ನಲ್ಲಿ ಅಗ್ನಿ ಅವಘಡ.. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ.. - ಸೌತ್ ಇಂಡಿಯಾ ಬ್ಯಾಂಕ್

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಾಲಪ್ಪ ವೃತ್ತದ ಬಳಿ ಇರುವ ಸೌತ್ ಇಂಡಿಯಾ ಬ್ಯಾಂಕ್​ನಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೀತಿದೆ.

ಸೌತ್ ಇಂಡಿಯಾ ಬ್ಯಾಂಕ್​ನಲ್ಲಿ ಅಗ್ನಿ ಅವಘಡ

By

Published : Sep 17, 2019, 12:30 PM IST

ಶಿವಮೊಗ್ಗ:ಭದ್ರಾವತಿ ತಾಲೂಕಿನ ಹಾಲಪ್ಪ ವೃತ್ತದ ಬಳಿಯ ಸೌತ್ ಇಂಡಿಯಾ ಬ್ಯಾಂಕ್​ನಲ್ಲಿ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ.

ಕಿಟಕಿಯಿಂದ ಹೊಗೆ ಕಾಣಿಸಿಕೊಂಡ ನಂತರ ಪಕ್ಕದ ಕಟ್ಟಡದ ಸೆಕ್ಯೂರಿಟಿ ಗಾರ್ಡ್​ ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸೌತ್ ಇಂಡಿಯಾ ಬ್ಯಾಂಕ್​ನಲ್ಲಿ ಅಗ್ನಿ ಅವಘಡ..

ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗುತ್ತಲೇ ಹೋಗಿದ್ದರಿಂದ ಶಿವಮೊಗ್ಗದಿಂದ ಅಗ್ನಿ ಶಾಮಕ ದಳ ಬರಬೇಕಾಯಿತು.ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯಿಂದಾಗಿ ಬ್ಯಾಂಕ್ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್​ನಲ್ಲಿನ ದಾಖಲೆಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details