ಕರ್ನಾಟಕ

karnataka

ETV Bharat / state

ಬ್ಯಾಂಕ್​ನಲ್ಲಿ ಶಾರ್ಟ್ ಸರ್ಕ್ಯೂಟ್.. ಕಂಪ್ಯೂಟರ್ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಶಾರ್ಟ್​ ಸರ್ಕ್ಯೂಟ್​ ಹೇಗಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಗೊತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಕಿ

By

Published : Jun 10, 2019, 9:57 AM IST

ಶಿವಮೊಗ್ಗ:ಜಿಲ್ಲೆಯ ಸಾಗರ ಪಟ್ಟಣದ ಮೈಸೂರು ಕೆಫೆ ಹೋಟೆಲ್ ಮುಂಭಾಗದಲ್ಲಿ ಇರುವ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ಮೌಲ್ಯದ ಉಪಕರಣಗಳು ಭಸ್ಮವಾಗಿವೆ.

ಬ್ಯಾಂಕ್​ನಲ್ಲಿದ್ದ ಕಂಪ್ಯೂಟರ್, ಸ್ಕ್ಯಾನರ್​ಗಳು, ಪಾಸ್​ಬುಕ್ ಪ್ರಿಂಟರ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿವೆ. ಬ್ಯಾಂಕ್​ನ ಎಟಿಎಂ ಭದ್ರತಾ ಸಿಬ್ಬಂದಿ ಬ್ಯಾಂಕ್ ಮ್ಯಾನೇಜರ್​ಗೆ ತಕ್ಷಣ ಕರೆ ಮಾಡಿ ಈ ವಿಷಯ ಮುಟ್ಟಿಸಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯಕ್ಕೆ ಲಾಕರ್​ನಲ್ಲಿದ್ದ ದಾಖಲೆ ಪತ್ರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ಅಶೋಕ್, ಈಶ್ವರ್ ನಾಯ್ಕ್, ಅಬ್ದುಲ್​ ರಜಾಕ್, ಜೆ ರವಿ, ಸತೀಶ್, ಶ್ರೀನಿವಾಸ್ ಹಾಗೂ ಚಾಲಕ ಶಂಕರ್​ಗೌಡ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details