ಕರ್ನಾಟಕ

karnataka

ETV Bharat / state

ಶಿವಮೊಗ್ಗ: 12 ಮಳಿಗೆಗಳ ಬಾಡಿಗೆ ಮನ್ನಾ ಮಾಡಿ ಮಾನವಿಯತೆ ಮೆರೆದ ಮಾಲೀಕ - ಕಾಂಪ್ಲೆಕ್ಸ್ ಬಾಡಿಗೆ ಮನ್ನಾ

ಶಿರಾಳಕೊಪ್ಪದ ಕಾಂಪ್ಲೆಕ್ಸ್​ ಮಾಲೀಕರೊಬ್ಬರು ತಮ್ಮ 12 ಮಳಿಗೆಯ ಏಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಬಾಡಿಗೆದಾರರ ನೆರವಿಗೆ ನಿಂತಿದ್ದಾರೆ.

Shop
ಮಳಿಗೆ

By

Published : May 3, 2020, 10:27 AM IST

ಶಿವಮೊಗ್ಗ: ಲಾಕ್ ಡೌನ್ ನಿಂದಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಶಿರಾಳಕೊಪ್ಪದ ಕಾಂಪ್ಲಕ್ಸ್ ಮಾಲೀಕರೊಬ್ಬರು ತಮ್ಮ ಕಾಂಪ್ಲೆಕ್ಸ್ 12 ಮಳಿಗೆಯ ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಬಸ್ ನಿಲ್ದಾಣದ ಬಳಿ ಇರುವ ರವಿ ಕಾಂಪ್ಲೆಕ್ಸ್ ಮಾಲೀಕರಾದ ರವಿ ರವರು ತಮ್ಮ 12 ಮಳಿಗೆಯ ಏಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಬಾಡಿಗೆದಾರರ ನೆರವಿಗೆ ನಿಂತಿದ್ದಾರೆ.

ಲಾಕ್​ಡೌನ್​ನಲ್ಲಿ ಮಳಿಗೆ ಬಾಡಿಗೆ ಮನ್ನಾ ಮಾಡಿದ ಮಾಲೀಕ

ವ್ಯಾಪಾರವಿಲ್ಲದೆ, ಜೀವನ ನಡೆಸುತ್ತಿರುವುದೇ ಕಷ್ಟವಾದಾಗ ಬಾಡಿಗೆ ಕೇಳುವುದು ಸರಿಯಲ್ಲ ಎಂದು ತಿಳಿದ ರವಿ ಅವರು ಏಪ್ರಿಲ್ ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಅಲ್ಲದೆ, ಮಳಿಗೆಯವರು ವ್ಯಾಪಾರ ಮಾಡುವಾಗ, ಅಂತರ ಕಾಯ್ದು ಕೊಂಡು, ಮಾಸ್ಕ್ ಧರಿಸಿ,‌ ಸ್ಯಾನಿಟೈಸರ್ ಬಳಸಿ ವ್ಯಾಪಾರ ನಡೆಸಿ ಎಂದು ಸಲಹೆ ನೀಡಿದ್ದಾರೆ.

ಶಿರಾಳಕೊಪ್ಪದಲ್ಲಿಯೇ ಅತ್ಯಂತ ಕಡಿಮೆ ಬಾಡಿಗೆಗೆ ಮಳಿಗೆ ನೀಡಿರುವ ರವಿ ಅವರಿಗೆ ಬಾಡಿಗೆದಾರರು ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details