ಶಿವಮೊಗ್ಗ:ಯಾವುದೇ ಸಂಘ-ಸಂಸ್ಥೆಗಳಲ್ಲಿ ಅಲ್ಲಿನ ಮುಖ್ಯಸ್ಥ ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಸಮನ್ವಯತೆ ಅತಿ ಮುಖ್ಯ. ಆದರೆ, ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆ ಇದಕ್ಕೆ ತದ್ವಿರುದ್ದವಾಗಿದೆ. ಇಲ್ಲಿನ ಡೈರೆಕ್ಟರ್ ಹಾಗೂ ಸಿಬ್ಬಂದಿ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಈಗ ಸಿಮ್ಸ್‌ನ ನಿರ್ದೇಶಕರು ಹಾಗೂ ಸಿಬ್ಬಂದಿ ನಡುವಿನ ಜಟಾಪಟಿ ಡಿಸಿ ಕಚೇರಿ ತನಕ ತಲುಪಿದೆ.
ಸಿಮ್ಸ್ ನಿರ್ದೇಶಕರ ವಿರುದ್ಧ ಡಿಸಿ ಕಚೇರಿ ಮೆಟ್ಟಿಲೇರಿದ ಆಸ್ಪತ್ರೆ ಸಿಬ್ಬಂದಿ.. - ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸುದ್ದಿ
ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಡೈರೆಕ್ಟರ್ ಹಾಗೂ ಸಿಬ್ಬಂದಿ ನಡುವೆ ಯಾವುದೇ ಹೊಂದಾಣಿಕೆ ಇಲ್ಲದೇ ಇದೀಗ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಸಪತ್ರೆ ಸಿಬ್ಬಂದಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ.

ಸಿಮ್ಸ್‌ನಲ್ಲಿ 114 ಶುಶ್ರೂಕರು 24x7ನಂತೆ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಉಳಿದುಕೊಳ್ಳಲು ಸಿಮ್ಸ್‌ನ ಕ್ವಾರ್ಟಸ್ ಅತಿ ಅವಶ್ಯಕ. ಕಾರಣ ಇವರಿಗೆ ಆಸ್ಪತ್ರೆಯ ಪಕ್ಕದಲ್ಲೇ ಇರುವ ಕ್ವಾಟರ್ಸ್ ಸಿಕ್ಕರೆ ರೋಗಿಗಳ ಸೇವೆಗೆ ಬೇಗ ಬರಬಹುದಾಗಿದೆ.ಆದರೆ, ಇವರಿಗೆ ಕ್ವಾಟರ್ಸ್ ನೀಡದೆ, ಹೊರಗುತ್ತಿಗೆ ನೌಕರರಿಗೆ ಕ್ವಾರ್ಟಸ್ ನೀಡಿ ನಿರ್ದೆಶಕ ಡಾ.ಲೇಪಾಕ್ಷಿರವರು ತಮಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಶುಶ್ರೂಕರು ಆರೋಪಿಸಿದ್ದಾರೆ. ಅಲ್ಲದೆ ಶುಶ್ರೂಕರು ಖಾಯಂ ನೌಕರರಾಗಿದ್ದು, ಇವರ ಸಂಬಳದಿಂದ ಹೆಚ್‌ಆರ್ ಕಟ್ ಆಗುತ್ತದೆ. ಆದರೆ, ಗುತ್ತಿಗೆ ನೌಕರರಿಂದ ಯಾವುದೇ ಹಣ ಕಟ್ ಆಗುವುದಿಲ್ಲ. ಹೀಗೆ ಮಾಡುವ ಮೂಲಕ ನಿರ್ದೇಶಕರು ಶುಶ್ರೂಕರಿಗೆ ಅನ್ಯಾಯವಾಗುವಂತೆ ಮಾಡುತ್ತಿದ್ದಾರೆ.
ಶುಶ್ರೂಕಿಯಾದ ಪ್ರೇಮಾರವರಿಗೆ ಕ್ವಾಟರ್ಸ್ ನೀಡಿ ಎಂದು ಮನವಿ ಮಾಡಿದರೂ ಅದನ್ನು ಆಲಿಸದೆ, ಅದೇ ಕ್ವಾರ್ಟಸ್‌ನ ಡಾಡಾ ಎಂಟ್ರಿ ಆಪರೇಟರ್ಗೆ ನೀಡಿದ್ದಾರೆ. ಅಲ್ಲದೆ, ಕೃಷ್ಣ ಎಂಬ ನೌಕರನಿಗೆ ಸಾಕಷ್ಟು ಸತಾಯಿಸಿ ಒಂದು ಕ್ವಾಟರ್ಸ್ ನೀಡಿದ್ದಾರೆ. ಅದನ್ನು ಮುಂಚೆಯೇ ಗುತ್ತಿಗೆ ನೌಕರನಿಗೆ ನೀಡಿದ್ದು, ಈಗ ಕೃಷ್ಣಪ್ಪನವರಿಗೆ ನೀಡಿದ್ದಾರೆ. ಕೃಷ್ಣಪ್ಪ ಹೋಗಿ ಗುತ್ತಿಗೆ ನೌಕರನಿಗೆ ಕ್ವಾಟರ್ಸ್ ಖಾಲಿ ಮಾಡುವಂತೆ ತಿಳಿಸಿದಾರೆ. ಆತ ಕೃಷ್ಣಪ್ಪನವರಿಗೆ ಆವಾಜ್ ಹಾಕಿ ಕಳುಹಿಸಿದ್ದಾರೆ. ಅಲ್ಲದೆ, ಓರ್ವ ನೌಕರ ನಿರ್ದೇಶಕರನ್ನು ಭೇಟಿ ಮಾಡಬೇಕು ಅಂತಾ ಅವರ ಕಚೇರಿ ಬಳಿ ಹೋದ್ರೆ, ನಾಲ್ಕೈದು ಗಂಟೆ ಕಾಯಿಸುತ್ತಾರೆ. ಇಂತಹ ನಿರ್ದೇಶಕರು ತಮಗೆ ಬೇಡ ಎಂದು ನೌಕರರು ಒತ್ತಾಯಿಸುವಷ್ಟರ ಮಟ್ಟಿಗೆ ನಿರ್ದೇಶಕರಿಂದ ಶುಶ್ರೂಕರು ನೂಂದು ಹೋಗಿದ್ದಾರೆ. ತಮಗೆ ನ್ಯಾಯ ದೂರಕಿಸಿ ಕೊಡಬೇಕು ಎಂದು ಆರೋಗ್ಯ ಇಲಾಖೆಯ ಸಂಘ ಹಾಗೂ ಶುಶ್ರೂಕರ ನೌಕರರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.