ಶಿವಮೊಗ್ಗ:ಜಿಲ್ಲೆಯ ಸಂತೆಕಡೂರು ಗ್ರಾಮದ ಆರಾಧನಾ ವೈನ್ಸ್ ಶಾಪ್ನಲ್ಲಿ ಮೇಲ್ಛಾವಣಿ ಕೊರೆದು ಮದ್ಯ ಕಳ್ಳತನ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮದ್ಯ ಕಳ್ಳತನ! - ಶಿವಮೊಗ್ಗ ಲಾಕ್ಡೌನ್ ಸುದ್ದಿ
ಶಿವಮೊಗ್ಗ ಜಿಲ್ಲೆಯ ಸಂತೆಕಡೂರಿನ ಮದ್ಯದಂಗಡಿ ಒಂದರಲ್ಲಿ ಮೇಲ್ಛಾವಣಿ ಕೊರೆದು ಮದ್ಯ ಕಳ್ಳತನ ಮಾಡಿದ್ದು, ಸ್ಥಳಕ್ಕೆ ಅಬಕಾರಿ ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭದ್ರಾವತಿ ನಿವಾಸಿ ಎಸ್.ಶಿವಪ್ಪ ಎಂಬುವವರ ಒಡೆತನದ ಮದ್ಯದಂಗಡಿಯಲ್ಲಿ ಕಳ್ಳತನ ನಡೆದಿದ್ದು, ಲಾಕ್ಡೌನ್ ಕಾರಣ ಮದ್ಯ ಸಿಗದೆ ವೈನ್ ಶಾಪ್ ಕೆಲಸಗಾರನೇ ಮೇಲ್ಛಾವಣಿ ಒಡೆದು ಕಳ್ಳತನಕ್ಕೆ ಯತ್ನಿಸಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಳೆದ 20 ದಿನಗಳಲ್ಲಿ ಇದು ನಾಲ್ಕನೇ ಕಳ್ಳತನ ಪ್ರಕರಣವಾಗಿದೆ. ಸ್ಥಳಕ್ಕೆ ಅಬಕಾರಿ ಇನ್ಸ್ಪೆಕ್ಟರ್ ಹನುಮಂತಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.