ಶಿವಮೊಗ್ಗ :ಮಲೆನಾಡಿನಲ್ಲಿ ಮಳೆಯ ಆರ್ಭಟದ ಮಧ್ಯೆ ಕುರುಕ್ಷೇತ್ರದ ಬಿರುಗಾಳಿಯೂ ಜೋರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಶಿವಮೊಗ್ಗದ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ದಿನದ ಎಲ್ಲಾ ಷೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಶಿವಮೊಗ್ಗದಲ್ಲಿ ಮಳೆಯನ್ನೂ ಲೆಕ್ಕಿಸದೇ 'ಕುರುಕ್ಷೇತ್ರ' ಚಿತ್ರ ನೋಡಿದ ಡಿಬಾಸ್ ಅಭಿಮಾನಿಗಳು - challenging star darshan
ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ ಅಭಿಮಾನಿಗಳು ದರ್ಶನ್ ಅಭಿನಯದ 50ನೇ ಸಿನಿಮಾಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸುವ ಮೂಲಕ ಶುಭ ಹಾರೈಸಿದ್ದಾರೆ.

ಅದ್ಭುತ ತಾರಾಗಣ, 3ಡಿ ಎಫೆಕ್ಟ್ ಹೀಗೆ ನಾನಾ ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾ, ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿದೆ. ಅಲ್ಲದೇ ಕುರುಕ್ಷೇತ್ರ ಚಿತ್ರವನ್ನು 3 ಡಿಯಲ್ಲಿ ಸವಿಯುವ ಅವಕಾಶ ಸಿಕ್ಕಿರುವುದು ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ.