ಕರ್ನಾಟಕ

karnataka

ETV Bharat / state

ಅಪ್ಪನ ಕನಸು ನನಸಾಗಲಿಲ್ಲ, ಮಗ ಅದನ್ನ ಸಾಧಿಸಿದ.. 777ನೇ ರ‍್ಯಾಂಕ್​ ಪಡೆದ ಪುತ್ರನ ಬಗ್ಗೆ ತಂದೆಗೆ ಹೆಮ್ಮೆ!! - UPSC achievement

ನನ್ನ ಮಗ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದ. ನಾನೂ ಸಹ ಪದವಿ ಮುಗಿದ ಮೇಲೆ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದೆ. ಆದರೆ, ನನಗದು ಸಾಧ್ಯವಾಗಿರಲಿಲ್ಲ. ನನ್ನ ಕನಸನ್ನ ನನ್ನ ಮಗ ನನಸು ಮಾಡಿದ್ದಾನೆ.

Father who praised his son's achievement
ಯುಪಿಎಸ್​ಸಿ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್​ ಪಡೆದ ಚಂದನ್

By

Published : Aug 7, 2020, 9:34 PM IST

Updated : Aug 7, 2020, 9:58 PM IST

ಶಿವಮೊಗ್ಗ :ಇತ್ತೀಚೆಗೆ ಯುಪಿಎಸ್​ಸಿ ಫಲಿತಾಂಶ ಪ್ರಕಟಗೊಂಡಿದ್ದು ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯ ನಿವಾಸಿ ಚಂದನ್ ಅವರು ಯುಪಿಎಸ್​ಸಿ​ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್​ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್​ ಪಡೆದ ಚಂದನ್

ಇನ್ನು ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಚಂದನ್, ತಮ್ಮ ಓದು ಹಾಗೂ ಮುಂದಿನ ಗುರಿ ಏನು ಅನ್ನೋದನ್ನು ಹಂಚಿಕೊಂಡಿದ್ದಾರೆ. ಐಪಿಎಸ್ ಆಗಬೇಕೆನ್ನುವುದು ನನ್ನ ಆಸೆ. ಆದರೆ, ನನ್ನ ರ‍್ಯಾಂಕಿಂಗ್​ಗೆ ಇದು ಸಿಗುವುದಿಲ್ಲ. ಹಾಗಂತಾ, ಈ ಪ್ರಯತ್ನ ಬಿಡುವುದಿಲ್ಲ. ಪ್ರಯತ್ನ ಎನ್ನುವುದಿದ್ರೆ ಇದು ಖಂಡಿತ ಸಾಧ್ಯ. ಈ ಪ್ರಯತ್ನಕ್ಕೆ ತಂದೆ-ತಾಯಿ ಸೇರಿ ಎಲ್ಲರ ಪ್ರೋತ್ಸಾಹ ಅಗತ್ಯ. ನನಗೆ ಅದು ಸಿಕ್ಕಿತು.

ತಂದೆ-ತಾಯಿಯೊಂದಿಗೆ ಚಂದನ್

ಹಾಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಎಂಜಿನಿಯರ್​ ಪದವೀಧರನಾದ ನನಗೆ ಅಪ್ಪ ಹಣಕಾಸಿನ ಸಪೋರ್ಟ್ ಮಾಡಿದ್ರೆ, ಅಮ್ಮ ಎಮೋಷನಲ್ ಸಪೋರ್ಟ್ ಕೊಟ್ರು. ಇದರ ಫಲವೇ ಈ ಸಾಧನೆ. ಯಾರೂ ಸಹ ಆಗಲ್ಲ ಎಂದು ಹಿಂದೆ ಸರಿಯಬೇಡಿ. ಒಂದಲ್ಲ ಒಂದು ದಿನ ನಿಮ್ಮ ಕನಸು ನನಸಾಗುತ್ತೆ ಎನ್ನುತ್ತಾರೆ ಯುಪಿಎಸ್​ಸಿ​ ರ‍್ಯಾಂಕ್‌ ಪಡೆದ ಚಂದನ್.

ತಂದೆ-ತಾಯಿಯೊಂದಿಗೆ ಚಂದನ್

ಮಗನ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿದ ತಂದೆ ಶ್ರೀನಿವಾಸ್, ನನ್ನ ಮಗ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದ. ನಾನೂ ಸಹ ಪದವಿ ಮುಗಿದ ಮೇಲೆ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದೆ. ಆದರೆ, ನನಗದು ಸಾಧ್ಯವಾಗಿರಲಿಲ್ಲ. ನನ್ನ ಕನಸನ್ನ ನನ್ನ ಮಗ ನನಸು ಮಾಡಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.

ಯುಪಿಎಸ್​ಸಿ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್​ ಪಡೆದ ಚಂದನ್
Last Updated : Aug 7, 2020, 9:58 PM IST

ABOUT THE AUTHOR

...view details