ಶಿವಮೊಗ್ಗ: ಶಿವಮೊಗ್ಗದ ರೌಡಿಶೀಟರ್, ಪೊಲೀಸರಿಗೆ ಬೇಕಾಗಿದ್ದ ಇಮ್ರಾನ್ ಖಾನ್(36)(Imran Khan) ಅನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಶಿವಮೊಗ್ಗದ ರೌಡಿಶೀಟರ್ ಮುಂಬೈನಲ್ಲಿ ಬಂಧನ - ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್
ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ ಅವರು ಎರಡು ತಂಡವನ್ನು ರಚಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ..
![ಶಿವಮೊಗ್ಗದ ರೌಡಿಶೀಟರ್ ಮುಂಬೈನಲ್ಲಿ ಬಂಧನ Shivamogga's rowdy arrested in Mumbai](https://etvbharatimages.akamaized.net/etvbharat/prod-images/768-512-13634044-thumbnail-3x2-nin.jpg)
ಶಿವಮೊಗ್ಗದ ರೌಡಿ ಮುಂಬೈನಲ್ಲಿ ಬಂಧನ
ಇಮ್ರಾನ್ 2017ರಲ್ಲಿ ದಾಖಲಾದ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ (District SP Lakshmi Prasad) ಅವರು ಎರಡು ತಂಡವನ್ನು ರಚಿಸಿದ್ದರು.
ಕುಂಸಿ ಪಿಐ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ಶಿವಮೊಗ್ಗ ಗ್ರಾಮಾಂತರ ಪಿಐ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು. ಸದ್ಯ ಇಮ್ರಾನ್ ಖಾನ್ ಅನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.