ಕರ್ನಾಟಕ

karnataka

ETV Bharat / state

ಭಾರಿ ಮಳೆಯಿಂದ ಹೆಚ್ಚಿದ ಒಳಹರಿವು.. ತುಂಗಾ ಡ್ಯಾಂ ನಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - shivamogga tunga dam news

ಮಲೆನಾಡಿನಲ್ಲಿ ವರುಣನ ಆರ್ಭಟ- ತುಂಗಾ ಆಣೆಕಟ್ಟೆಗೆ ಹೆಚ್ಚಿದ ಒಳ ಹರಿವು- ಜಲಾಶಯದಿಂದ 20 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ

tunga dam
ತುಂಗಾ ಅಣೆಕಟ್ಟೆನಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

By

Published : Jul 2, 2022, 9:40 PM IST

ಶಿವಮೊಗ್ಗ: ತಾಲೂಕಿನ ಗಾಜನೂರು ಬಳಿಯ ತುಂಗಾ ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ತುಂಗಾ ಹಿನ್ನೀರಿನ ಪ್ರದೇಶಗಳಾದ ಕಿಗ್ಗಾ, ಶೃಂಗೇರಿ, ಭಾಗಗಳಲ್ಲಿ ಬೆಳಗ್ಗೆಯಿಂದ ಭಾರಿ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ 20 ಗೇಟ್​ಗಳ ಮೂಲಕ ನೀರನ್ನು‌ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗದ ಮಂಟಪ‌ ಅರ್ಧ ಭಾಗ ಮುಳುಗಿದೆ.

ತುಂಗಾ ಅಣೆಕಟ್ಟೆಯಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಆಣೆಕಟ್ಟು 588.27 ಮೀಟರ್ ಎತ್ತರವಾಗಿದ್ದು, ಸುಮಾರು 3 ಟಿಎಂಸಿಯಷ್ಟು ನೀರು ಸಂಗ್ರಹವಾಗುತ್ತದೆ. ಅಣೆಕಟ್ಟಿನಿಂದ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸೇರಿದಂತೆ ಶಿವಮೊಗ್ಗ ತಾಲೂಕು, ಹೂನ್ನಾಳಿ ತಾಲೂಕುಗಳ ಕೃಷಿಗೆ ಹಾಗೂ ಹಾವೇರಿ ಜಿಲ್ಲೆಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತದೆ. ಇದು ರಾಜ್ಯದ ಅತಿ ಚಿಕ್ಕ ಹಾಗೂ ಬೇಗ ತುಂಬುವ ಅಣೆಕಟ್ಟೆ ಎಂಬ ಖ್ಯಾತಿಯನ್ನು ಹೊಂದಿದೆ.

ಇದನ್ನೂ ಓದಿ:ಹೆಚ್ಚಿದ ಮಳೆ.. ಹಾರಂಗಿ ಜಲಾಶಯದಿಂದ 1200ಕ್ಯೂಸೆಕ್​ ನೀರು ಬಿಡುಗಡೆ

ABOUT THE AUTHOR

...view details