ಶಿವಮೊಗ್ಗ:ಬಂಧಿತರಾದ ಶಂಕಿತ ಇಬ್ಬರು ಉಗ್ರರನ್ನು ಸಪ್ಟೆಂಬರ್ 30 ರ ತನಕ ಪೊಲೀಸ್ ಕಸ್ಟಡಿಗೆ ನೀಡಿ ಶಿವಮೊಗ್ಗ ಜಿಲ್ಲಾ ಜೆಎಂಎಫ್ಸಿ ಮೂರನೇ ನ್ಯಾಯಾಲಯ ನೀಡಿದೆ. ಯುಎಪಿಎ ಕಾಯ್ದೆಯಡಿ ಬಂಧಿತರಾದ ಪ್ರಕರಣ ಎರಡನೇ ಆರೋಪಿ ಮಾಝ್ ಹಾಗೂ ಮೂರನೇ ಆರೋಪಿ ಸೈಯ್ಯದ್ ಯಾಸೀನ್ರ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗುತ್ತದೆ.
ಇದರಿಂದ ಇಂದು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಮೂರನೇ ಜೆಎಂಎಫ್ಸಿ ನ್ಯಾಯಾಲಯಧೀಶರ ಮುಂದೆ ಪೊಲೀಸರು ಬಂಧಿತ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಐದು ದಿನ ತಮ್ಮ ಅವಧಿಗೆ ನೀಡಬೇಕೆಂದು ವಿನಂತಿಸಿಕೊಂಡರು. ಇದಕ್ಕೆ ನ್ಯಾಯಾಧೀಶರು ಸೆಪ್ಟೆಂಬರ್ 30ರ ತನಕ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.