ಶಿವಮೊಗ್ಗ:ನಗರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದಶಂಕಿತ ಉಗ್ರ ಮಾಜ್ ಮುನೀರ್ ಅಹಮ್ಮದ್ ತಂದೆ ಶುಕ್ರವಾರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಇಂದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆರೋಪಿಗೆ ಅವಕಾಶ ನೀಡಲಾಗಿದೆ. ಮುನೀರ್ ಅಹಮ್ಮದ್ನನ್ನು ಪೊಲೀಸರು ಇಂದು ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ.
ತೀರ್ಥಹಳ್ಳಿಯ ಸೂಪ್ಪುಗುಡ್ಡೆಯಲ್ಲಿನ ಮಾಜ್ ನಿವಾಸಕ್ಕೆ ಕರೆದುಕೊಂಡು ಹೋಗಿ ಅಂತಿಮ ದರ್ಶನದ ಬಳಿಕ ವಾಪಸ್ ಕರೆದುಕೊಂಡು ಬರಲಾಗುತ್ತದೆ. ಶಂಕಿತ ಉಗ್ರರ ಬಂಧನ ತಂಡದ ಡಿವೈಎಸ್ಪಿ ಶಾಂತವೀರಯ್ಯ ಅವರು ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.