ಕರ್ನಾಟಕ

karnataka

ETV Bharat / state

ರಕ್ತದ ಮಡುವಿನಲ್ಲಿ ವಿದ್ಯಾರ್ಥಿನಿ ಮೃತದೇಹ: ದುಷ್ಕೃತ್ಯ ಕಂಡು ಬೆಚ್ಚಿಬಿದ್ದ ಶಿವಮೊಗ್ಗ ಜನ - hosamane police station

ರಕ್ತದ ಮಡುವಿನಲ್ಲಿ ಬಿದ್ದಿರುವ ವಿದ್ಯಾರ್ಥಿನಿಯ ಮೃತದೇಹ ಕಂಡು ಜನರು ಬೆಚ್ಚಿಬಿದ್ದಿದ್ಧಾರೆ. ಮನೆಯಲ್ಲೇ ವಿದ್ಯಾರ್ಥಿನಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ.

ವಿದ್ಯಾರ್ಥಿನಿ ಕೊಲೆ

By

Published : Aug 4, 2019, 11:29 AM IST

Updated : Aug 4, 2019, 11:39 AM IST

ಶಿವಮೊಗ್ಗ:ವಿದ್ಯಾರ್ಥಿನಿಯೋರ್ವಳ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾವತಿಯ ಕಾಳಿಂಗನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ.

16 ವರ್ಷದ ಇಂದಿರಾ ಎಂಬ ವಿದ್ಯಾರ್ಥಿನಿ ಕೊಲೆಯಾದವಳು. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮನೆಯವರು ನೋಡಿದಾಗ ಇಂದಿರಾ ಅಡುಗೆ ಮನೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿ ಮೃತದೇಹ ಕಂಡು ಜನರು ಬೆಚ್ಚಿಬಿದ್ದಿದ್ಧಾರೆ.

ಕಾಳಿಂಗನಹಳ್ಳಿಗೆ ಎಸ್ಪಿ‌ ಕೆ.ಎಂ.ಶಾಂತರಾಜು ಭೇಟಿ, ಪರಿಶೀಲನೆ

ಇಂದಿರಾಳಿಗೆ ತಾಯಿ ಇದ್ದು, ತಂದೆ ಇರಲಿಲ್ಲ. ಈಕೆ ತನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ಜೊತೆ ಇದ್ದಳು. ಆದರೆ ಅವರಿಬ್ಬರೂ ಮೂಗರು. ಹೀಗಾಗಿ ಕೊಲೆ ಮಾಡಿದ್ದು ಯಾರು, ಯಾಕೆ ಮಾಡಿದರು ಎಂದು ಹೇಳುವವರೂ ಕೂಡ ಇಲ್ಲದಂತಾಗಿದೆ.

ಕೊಲೆ ಹೇಗೆ ನಡೆಯಿತು ಎಂಬುದು ಮನೆಯವರಿಗೆ ತಿಳಿದಿಲ್ಲ. ಸ್ಥಳಕ್ಕೆ ಎಸ್ಪಿ‌ ಕೆ.ಎಂ.ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 4, 2019, 11:39 AM IST

ABOUT THE AUTHOR

...view details