ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ಪೊಲೀಸರಿಗೆ ಎಸ್ಪಿಯಿಂದ ಗುಲಾಬಿ ನೀಡಿ ಗೌರವ - Corona Warriors

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮರಳಿ ಕರ್ತವ್ಯಕ್ಜೆ ಹಾಜರಾದ ಪೊಲೀಸರಿಗೆ ಎಸ್​ಪಿ ಕೆ.ಎಂ. ಶಾಂತರಾಜು ಗುಲಾಬಿ ಹೂ ನೀಡಿ ಗೌರವಿಸಿದ್ದಾರೆ.

SP shantaraju
ಎಸ್​ಪಿ ಕೆ.ಎಂ ಶಾಂತರಾಜು

By

Published : Oct 10, 2020, 5:14 PM IST

ಶಿವಮೊಗ್ಗ: ಕೊರೊನಾ ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸುವ ವೇಳೆ ಕೊರೊನಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು, ಮರಳಿ ಕರ್ತವ್ಯಕ್ಕೆ ಹಾಜರಾದ ಪೋಲಿಸ್ ಇಲಾಖೆಯ ಸಿಬ್ಬಂದಿಗಳನ್ನು ಎಸ್​ಪಿ ಕೆ.ಎಂ. ಶಾಂತರಾಜು ಅವರು ನಗರದ ಡಿಎಆರ್ ಮೈದಾನದಲ್ಲಿ ಗುಲಾಬಿ ಹೂ ನೀಡಿ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ಮೂಲಕ ಅಭಿನಂದಿಸಿದ್ದಾರೆ.

ಪೋಲಿಸರಿಗೆ ಗುಲಾಬಿ ನೀಡಿ ಗೌರವಿಸಿದ ಎಸ್​ಪಿ

ರಾಜ್ಯದಲ್ಲಿ ಕೊರೊನಾ ವೈರಸ್ ಕಂಡು ಬಂದ ನಂತರದಲ್ಲಿ ಪೊಲೀಸ್​ ಇಲಾಖೆಯ ಸಾವಿರಾರು ಜನ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಂತೆ ಜಿಲ್ಲೆಯ ಅನೇಕ ಪೋಲಿಸ್ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ತಗುಲಿತ್ತು.

ಇದೀಗ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಎಲ್ಲಾ ಸಿಬ್ಬಂದಿಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿರುವುದು ನಿಜಕ್ಕೂ ಶ್ಲಾಘನೀಯ.

ABOUT THE AUTHOR

...view details