ಶಿವಮೊಗ್ಗ: ಲಾಕ್ಡೌನ್ನಿಂದಾಗಿ ಅನೇಕ ಮದುವೆಗಳು ಮುಂದೂಡಲ್ಪಟ್ಟಿವೆ. ಆದ್ರೆ ಜಿಲ್ಲೆಯ ಸೊರಬ ತಾಲೂಕಿನ ಸಂಗೀತ ಹಾಗೂ ಕಾಂತೇಶ್ ಎಂಬುವರು ಬಸವಣ್ಣನ ಪುತ್ಥಳಿ ಮುಂದೆ ಸರಳವಾಗಿ ವಿವಾಹವಾಗಿದ್ದಾರೆ.
ಶಿವಮೊಗ್ಗ: ಬಸವಣ್ಣನ ಪುತ್ಥಳಿ ಮುಂದೆ ಸರಳ ವಿವಾಹವಾದ ನವಜೋಡಿ! - Simple marrige in front Basavanna statue
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಜಡೆ ಗ್ರಾಮದಲ್ಲಿನ ಬಸವೇಶ್ವರ ಪುತ್ಥಳಿಯ ಮುಂದೆ, ಸಂಗೀತ ಹಾಗೂ ಕಾಂತೇಶ್ ಎಂಬುವರು ಸರಳವಾಗಿ ವಿವಾಹವಾಗಿದ್ದಾರೆ.
![ಶಿವಮೊಗ್ಗ: ಬಸವಣ್ಣನ ಪುತ್ಥಳಿ ಮುಂದೆ ಸರಳ ವಿವಾಹವಾದ ನವಜೋಡಿ! ಬಸವಣ್ಣನ ಪುತ್ಥಳಿ ಮುಂದೆ ಸರಳ ವಿವಾಹ](https://etvbharatimages.akamaized.net/etvbharat/prod-images/768-512-6949551-745-6949551-1587900050917.jpg)
ಬಸವಣ್ಣನ ಪುತ್ಥಳಿ ಮುಂದೆ ಸರಳ ವಿವಾಹ
ಸೊರಬ ತಾಲೂಕು ಜಡೆ ಗ್ರಾಮದಲ್ಲಿನ ಬಸವೇಶ್ವರ ಪುತ್ಥಳಿಯ ಮುಂದೆ ಜಡೆಯ ನಿವಾಸಿ ವಿಠೋಬರಾವ್ ಉರಣಕರ್ ಅವರ ಪುತ್ರಿ ಸಂಗೀತ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹೆಚ್.ಪಿ. ಕಾಂತೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜಡೆ ಮಠದ ಡಾ. ಮಹಾಂತ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮದುವೆ ನಡೆಯಿತು.
ನವ ವಧು-ವರನಿಗೆ ಜಡೆ ಮಠದ ಡಾ.ಮಹಾಂತ ಸ್ವಾಮೀಜಿ ಆಶೀರ್ವಾದ ಮಾಡಿದರು. ಈ ವೇಳೆ ಕುಟುಂಬಸ್ಥರ ಜೊತೆ ಜಿ.ಪಂ ಸದಸ್ಯ ಶಿವಲಿಂಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಗೌಡ ಉಪಸ್ಥಿತರಿದ್ದರು.