ಶಿವಮೊಗ್ಗ :ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಛಾವಣಿ ಹಾಳಾಗಿ ಮೂರು ವರ್ಷಗಳಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮಳೆ ಬಂದರೆ ಕಡತ ಮತ್ತು ಕಂಪ್ಯೂಟರ್ಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಡುತ್ತಾರೆ.
ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ಈ ಕಚೇರಿ ಇದೆ. ಕಚೇರಿಯ ಕಟ್ಟಡ ಬ್ರೀಟಷ ಕಾಲದಲ್ಲಿ ಅಂದರೆ 1855 ರಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡ ಇಂದಿಗೂ ಗಟ್ಟಿ ಮುಟ್ಟಾಗಿದೆ. ಆದರೆ, ಛಾವಣಿ ಮಾತ್ರ ಹಾಳಾಗಿ ಹೋಗಿದೆ. ಮೇಲ್ಛಾವಣಿ ಹಾಳಾಗಿರುವ ಕಾರಣ ಮಳೆ ಬಂದಾಗ ಕಚೇರಿಯ ಒಳಗೇ ನೀರು ಬರಲು ಪ್ರಾರಂಭಿಸುತ್ತದೆ.