ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಪುರಲೆ ಗ್ರಾಮಸ್ಥರಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ - Purale villagers protest

ಪುರಲೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ಮನೆ ಇಲ್ಲದ ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಯಾವುದೇ ನೋಟಿಸ್ ನೀಡದೇ ತೆರವುಗೋಳಿಸಿದ್ದಾರೆ.ಇದನ್ನು ಖಂಡಿಸಿ ಮಾಹಾನಗರಪಾಲಿಕೆ ಕಾಂಗ್ರೆಸ್ ಸದಸ್ಯ ರಮೇಶ್ ಹೆಗಡೆ ನೇತೃತ್ವಲ್ಲಿ ಪುರಲೆ ಗ್ರಾಮಸ್ಥರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಪುರಲೆ ಗ್ರಾಮಸ್ಥರಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ
ಪುರಲೆ ಗ್ರಾಮಸ್ಥರಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ

By

Published : Nov 6, 2020, 9:16 PM IST

Updated : Nov 6, 2020, 9:21 PM IST

ಶಿವಮೊಗ್ಗ:ಮಹಾನಗರ ಪಾಲಿಕೆ ವ್ಯಾಪ್ತಿಯ ಪುರಲೆ ಗ್ರಾಮದ ಸರ್ವೆ ನಂಬರ್ 34 ಮತ್ತು 35ರಲ್ಲಿ ಇರುವ ಗ್ರಾಮ ಠಾಣಾ ಜಾಗದ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ, ಮಾಹಾನಗರಪಾಲಿಕೆ ಕಾಂಗ್ರೆಸ್ ಸದಸ್ಯ ರಮೇಶ್ ಹೆಗಡೆ ನೇತೃತ್ವಲ್ಲಿ ಪುರಲೆ ಗ್ರಾಮಸ್ಥರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಪುರಲೆ ಗ್ರಾಮಸ್ಥರಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ

ಪುರಲೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ಮನೆ ಇಲ್ಲದ ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಯಾವುದೇ ನೋಟಿಸ್ ನೀಡದೇ ತೆರವುಗೋಳಿಸಿದ್ದಾರೆ . ಆದರೆ ಅದೇ ಜಾಗದಲ್ಲಿಮಾಹ ನಗರಪಾಲಿಕೆಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಗ್ರಾಮಠಾಣಾ ಜಾಗವನ್ನು ಪ್ರಭಾವಿ ಡೆವಲಪರ್ಸ್ ಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.

ಪುರಲೆ ಗ್ರಾಮಸ್ಥರಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ

ಒಂದು ಎಕರೆ ಗ್ರಾಮಠಾಣಾ ಜಾಗದಲ್ಲಿ ನಿವೇಶನ ರಚಿಸಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಅಕ್ರಮ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಹಾಗಾಗಿ ಒತ್ತುವರಿ ಮಾಡಿದವರ ವಿರುದ್ಧ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ಪಾಲಿಕೆಯ ಸ್ವತ್ತನ್ನು ಉಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Last Updated : Nov 6, 2020, 9:21 PM IST

ABOUT THE AUTHOR

...view details