ಕರ್ನಾಟಕ

karnataka

ETV Bharat / state

ಖಾಸಗಿ ಬಸ್​​​ ಡ್ರೈವರ್​ ಹಾಗೂ ಕಂಡಕ್ಟರ್​ಗಳಿಗೂ ವಿಶೇಷ ಪ್ಯಾಕೇಜ್​ ಘೋಷಿಸಲು​ ಆಗ್ರಹ

ಕೊರೊನಾ ವೈರಸ್ ಹಿನ್ನೆಲೆ ದೇಶವೇ ಲಾಕ್​ಡೌನ್ ಆಗಿದೆ. ಅದರಂತೆ ನಗರ ಸಾರಿಗೆ ಬಸ್​ಗಳ ಸಂಚಾರವನ್ನು ಸಹ ನಿಲ್ಲಿಸಲಾಗಿದೆ. ಹಾಗಾಗಿ ಖಾಸಗಿ ಬಸ್​​ಗಳಲ್ಲಿ ಕೆಲಸ ಮಾಡುತ್ತಿರುವ ಡ್ರೈವರ್ ಹಾಗೂ ಕಂಡಕ್ಟರ್​ಗಳಿಗೂ ಕೂಡ ಸರ್ಕಾರ ಸಹಾಯ ಮಾಡಲು ಆಗ್ರಹಿಸಲಾಗಿದೆ.

shivamogga private buss Association
ನಗರ ಸಾರಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಸಿ ಶಿವರಾಜ್

By

Published : May 13, 2020, 8:09 PM IST

ಶಿವಮೊಗ್ಗ:ಖಾಸಗಿ ಬಸ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರೈವರ್ ಹಾಗೂ ಕಂಡಕ್ಟರ್​ಗಳಿಗೂ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಗರ ಸಾರಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಸಿ.ಶಿವರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ಹಿನ್ನೆಲೆ ದೇಶವೇ ಲಾಕ್​ಡೌನ್ ಆಗಿದೆ. ಅದರಂತೆ ನಗರ ಸಾರಿಗೆ ಬಸ್​ಗಳ ಸಂಚಾರವನ್ನು ಸಹ ನಿಲ್ಲಿಸಲಾಗಿದೆ. ಹಾಗಾಗಿ ಖಾಸಗಿ ಬಸ್​​ಗಳಲ್ಲಿ ಕೆಲಸ ಮಾಡುತ್ತಿರುವ ಡ್ರೈವರ್ ಹಾಗೂ ಕಂಡಕ್ಟರ್​ಗಳಿಗೂ ಕೂಡ ಸರ್ಕಾರ ಸಹಾಯ ಮಾಡಬೇಕು ಎಂದು ಕೇಳಿಕೊಂಡರು.

ಗ್ರೀನ್ ಝೋನ್​ಗಳಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಬಸ್ ಸಂಚಾರಕ್ಕೆ ಸಡಿಲಿಕೆ ಮಾಡಿಲ್ಲ. ಇದರಿಂದ ಎರಡು ತಿಂಗಳಿನಿಂದ ಸಂಬಳ ಇಲ್ಲದೆ, ಮನೆಗಳ ಬಾಡಿಗೆ ಕಟ್ಟಲಾಗದೆ ಹೊತ್ತಿನ ಊಟ ಸಹ ಇಲ್ಲದೆ ಬದುಕು ಸಾಗಿಸುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details