ಕರ್ನಾಟಕ

karnataka

ETV Bharat / state

ಪ್ರಚೋದನಕಾರಿ ಹೇಳಿಕೆ ಆರೋಪ: ಅರುಣ್ ಪುತ್ತಿಲ ವಿರುದ್ಧ ಸುಮೋಟೋ‌ ಕೇಸ್​ ದಾಖಲು - ಹಿಂದೂ ಮುಖಂಡ ಅರುಣ ಪುತ್ತಿಲ

ಶಿವಮೊಗ್ಗದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಿಂದೂ ಮುಖಂಡ ಅರುಣ್ ಪುತ್ತಿಲ ವಿರುದ್ಧ ಸುಮೋಟೋ‌ ಪ್ರಕರಣ ದಾಖಲಾಗಿದೆ.

shivamogga-police-registered-suo-moto-case-against-arun-puttila-provocative-statement
ಪ್ರಚೋದನಕಾರಿ ಹೇಳಿಕೆ ಆರೋಪ: ಅರುಣ್ ಪುತ್ತಿಲ ವಿರುದ್ಧ ಸುಮೋಟೋ‌ ಕೇಸ್​ ದಾಖಲು

By ETV Bharat Karnataka Team

Published : Oct 7, 2023, 4:10 PM IST

ಶಿವಮೊಗ್ಗ:ನಗರದ ರಾಗಿಗುಡ್ಡದ ಬಡಾವಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಿಂದೂ ಮುಖಂಡ ಅರುಣ ಪುತ್ತಿಲ ಅವರ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ರಾಗಿಗುಡ್ಡದಲ್ಲಿ ಸೆಪ್ಟೆಂಬರ್ 1ರಂದು ಕಲ್ಲು ತೂರಾಟ ನಡೆದಿತ್ತು. ಬಳಿಕ ಪೊಲೀಸ್​ ಬಿಗಿ ಬಂದೋಬಸ್ತ್​ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಶುಕ್ರವಾರ ಮುಖಂಡ ಅರುಣ್ ಪುತ್ತಿಲ ಅವರು ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ, ಹಾನಿಗೊಳಗಾದವರ ಮನೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅರುಣ್ ಪುತ್ತಿಲ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇಸ್​ ದಾಖಲಾಗಿದೆ. ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ‌ ನೀಡಿರುವ ಅರುಣ್ ಪುತ್ತಿಲ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರಾಗಿಗುಡ್ಡ ಗಲಭೆ ಪ್ರಕರಣ: ಮಾರ್ಜಾಲ ನ್ಯಾಯದಂತೆ ಕಾಂಗ್ರೆಸ್ ಸರ್ಕಾರದ ವರ್ತನೆ- ಸಿ.ಟಿ.ರವಿ

ABOUT THE AUTHOR

...view details