ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಗಡಿಭಾಗದ ಚೆಕ್​ಪೋಸ್ಟ್​ಗೆ ‘ಸುಬಾಹು’ ಬಲ..

ಸಿಬ್ಬಂದಿ ತಮ್ಮ ಸ್ಮಾರ್ಟ್ ಫೋನ್​ನಲ್ಲಿ ಆ್ಯಪ್‌ನ ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಅದಕ್ಕೆ ತಮ್ಮ ಇಲಾಖೆಯ ಐಡಿ ಹಾಗೂ ಪಾಸ್​ವರ್ಡ್ ನೀಡಬೇಕು. ಈ ಆ್ಯಪ್​ ಮೂಲಕ ಗಡಿ ಭಾಗಕ್ಕೆ ಬೇರೆ ಜಿಲ್ಲೆಯಿಂದ ಬರುವ ವ್ಯಕ್ತಿ‌ಯ ಪಾಸ್ ಪರಿಶೀಲನೆ ನಡೆಸಿ, ಅವರ ಫೋಟೊವನ್ನು ತೆಗೆದುಕೊಳ್ಳಲಾಗುತ್ತದೆ. ಫೋಟೋ ಹಾಗೂ ಮಾಹಿತಿ ಜಿಲ್ಲಾ ಪೊಲೀಸ್ ಇಲಾಖೆಗೆ ಹೋಗುತ್ತದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗದ ಗಡಿಭಾಗದ ಚೆಕ್​ಪೋಸ್ಟ್​ಗೆ ‘ಸುಬಾಹು’ ಬಲ
ಶಿವಮೊಗ್ಗದ ಗಡಿಭಾಗದ ಚೆಕ್​ಪೋಸ್ಟ್​ಗೆ ‘ಸುಬಾಹು’ ಬಲ

By

Published : May 11, 2020, 8:44 PM IST

Updated : May 12, 2020, 5:28 PM IST

ಶಿವಮೊಗ್ಗ: ಲಾಕ್​ಡೌನ್​ನಿಂದಾಗಿ ಪ್ರತಿ ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್​ಪೋಸ್ಟ್​ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಜಿಲ್ಲೆಯ ಗಡಿ ಭಾಗದ ಚೆಕ್​ಪೋಸ್ಟ್​ಗಳು ಜಿಲ್ಲಾಡಳಿತದ ನಿಯಂತ್ರಣದಲ್ಲಿವೆ. ಸದ್ಯ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡ ಗಡಿಭಾಗದ ಚಲನವಲನಗಳನ್ನು ಸೆರೆಹಿಡಿಯುತ್ತಿದೆ.

ಶಿವಮೊಗ್ಗದ ಗಡಿಭಾಗದ ಚೆಕ್​ಪೋಸ್ಟ್​ಗೆ ‘ಸುಬಾಹು’ ಬಲ..

ಈ ಕುರಿತು ಎಸ್ಪಿ ಶಾಂತರಾಜು, ಪೊಲೀಸ್ ಇಲಾಖೆಯ ಸುಬಾಹು ಆ್ಯಪ್​ ಬಳಸಿಕೊಂಡು ಸ್ಮಾರ್ಟ್ ಆಗಿ ಕೆಲಸ ಪ್ರಾರಂಭಿಸಿದೆ. ಗಡಿ ಭಾಗದ ಚೆಕ್​ಪೋಸ್ಟ್​ನಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಸುಬಾಹು ಆ್ಯಪ್ ನೀಡಲಾಗಿದೆ. ಸಿಬ್ಬಂದಿ ತಮ್ಮ ಸ್ಮಾರ್ಟ್ ಫೋನ್​ನಲ್ಲಿ ಆ್ಯಪ್‌ನ ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಅದಕ್ಕೆ ತಮ್ಮ ಇಲಾಖೆಯ ಐಡಿ ಹಾಗೂ ಪಾಸ್​ವರ್ಡ್ ನೀಡಬೇಕು. ಈ ಆ್ಯಪ್​ ಮೂಲಕ ಗಡಿ ಭಾಗಕ್ಕೆ ಬೇರೆ ಜಿಲ್ಲೆಯಿಂದ ಬರುವ ವ್ಯಕ್ತಿ‌ಯ ಪಾಸ್ ಪರಿಶೀಲನೆ ನಡೆಸಿ, ಅವರ ಫೋಟೊವನ್ನು ತೆಗೆದುಕೊಳ್ಳಲಾಗುತ್ತದೆ. ಫೋಟೋ ಹಾಗೂ ಮಾಹಿತಿ ಜಿಲ್ಲಾ ಪೊಲೀಸ್ ಇಲಾಖೆಗೆ ಹೋಗುತ್ತದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗದ ಗಡಿಭಾಗದ ಚೆಕ್​ಪೋಸ್ಟ್​ಗೆ ‘ಸುಬಾಹು’ ಬಲ..

ಈ ಮಾಹಿತಿಯನ್ನು ಪೊಲೀಸ್ ಇಲಾಖೆಯು ಯಾವಾಗ ಬೇಕಾದರೂ ಸಹ ಪಡೆದುಕೊಳ್ಳಬಹುದು. ಸುಬಾಹು ಆ್ಯಪ್ ಇದ್ದರೆ, ಪೊಲೀಸರಿಗೆ ಹೆಚ್ಚಿನ ಸಿಬ್ಬಂದಿಯ ಅವಶ್ಯಕತೆ ಬೀಳುವುದಿಲ್ಲ. ಒಬ್ಬ ವ್ಯಕ್ತಿಯೇ ಪಾಸ್ ಪರಿಶೀಲನೆ ನಡೆಸಿ, ಫೋಟೋ ತೆಗೆದುಕೊಂಡು ಕಳುಹಿಸಬಹುದು. ಇದರಿಂದ ಚೆಕ್​ಪೋಸ್ಟ್​ನಲ್ಲಿ ತಪಾಸಣೆಯನ್ನು ಬೇಗ ಮುಗಿಸಿ ಕಳುಹಿಸಬಹುದಾಗಿದೆ ಎಂದು ಎಸ್ಪಿ ಶಾಂತರಾಜು ತಿಳಿಸಿದರು.

Last Updated : May 12, 2020, 5:28 PM IST

ABOUT THE AUTHOR

...view details