ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಎನ್‌ಐಎ ವಶಕ್ಕೆ

ಶಿವಮೊಗ್ಗದಲ್ಲಿಯೂ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ದಾಳಿ ನಡೆದಿದ್ದು, ಪಿಎಫ್​ಐ ರಾಜ್ಯ ವಲಯ ಅಧ್ಯಕ್ಷನನ್ನು ವಶಕ್ಕೆ ಪಡೆದಿದ್ದಾರೆ.

shivamogga-pfi-leader-detained-by-nia
ಶಿವಮೊಗ್ಗದಲ್ಲಿ ಎನ್​ಐಎ ದಾಳಿ: ಪಿಎಫ್ಐ ವಲಯ ಅಧ್ಯಕ್ಷ ವಶಕ್ಕೆ

By

Published : Sep 22, 2022, 10:59 AM IST

Updated : Sep 22, 2022, 12:15 PM IST

ಶಿವಮೊಗ್ಗ:ಪಿಎಫ್​ಐ ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ಎಂಬಾತನ ಮನೆ ಮೇಲೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಆತನನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಯಲಕಪ್ಪನ ಬೀದಿಯಲ್ಲಿನ ಶಾಹೀದ್ ನಿವಾಸದ ಮೇಲೆ ಇಂದು ಬೆಳಗಿನ ಜಾವ 2 ಗಂಟೆ ವೇಳೆಗೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಪರಿಶೀಲನೆ ಮುಗಿಸಿ, ಶಾಹೀದ್ ಖಾನ್ ವಶಕ್ಕೆ ಪಡೆದು ಕರೆದೊಯ್ಯಲಾಗಿದೆ. ಶಾಹೀದ್ ಖಾನ್ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ವಲಯ ಪಿಎಫ್​ಐ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Last Updated : Sep 22, 2022, 12:15 PM IST

ABOUT THE AUTHOR

...view details