ಶಿವಮೊಗ್ಗ:ಜಿಲ್ಲೆಯಲ್ಲಿ ಒಂದೂ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಜನ ಲಾಕ್ಡೌನ್ಗೆ ಉತ್ತಮವಾಗಿ ಸಹಕರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜನ ಲಾಕ್ಡೌನ್ಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ಈಶ್ವರಪ್ಪ - latest eshwarappa news
ಶಿವಮೊಗ್ಗ ಜಿಲ್ಲೆಯಲ್ಲಿ ಜನರ ಸಹಕಾರದಿಂದಾಗಿ ಇಲ್ಲಿಯವರೆಗೂ ಒಂದೂ ಕೊರೊನಾ ಪಾಸಿಟಿವ್ ಕೇಸ್ ಪತ್ತಯಾಗಿಲ್ಲ. ಮೆಗ್ಗಾನ್ ಹೆರಿಗೆ ವಾರ್ಡ್ಅನ್ನು ಹೆರಿಗೆ ವಾರ್ಡ್ ಆಗಿಯೇ ಬಳಸಲಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕೊರೊನಾ ಸ್ಥಿತಿಗತಿಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಲಾಕ್ಡೌನ್ಗೆ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೆಲವರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ನಮ್ಮ ಜಿಲ್ಲೆಗೆ ಬೇರೆ ಜಿಲ್ಲೆಯವರನ್ನು ಸೇರಿಸುತ್ತಿಲ್ಲ. ಅದೇ ರೀತಿ ನಮ್ಮ ಜಿಲ್ಲೆಯವರನ್ನು ಬೇರೆ ಜಿಲ್ಲೆಗೆ ಬಿಡುತ್ತಿಲ್ಲ ಎಂದರು.
ನಗರದ ಪ್ರಸಿದ್ಧ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿಯೇ ಹೆರಿಗೆ ಕೂಡ ನಡೆಯುತ್ತಿದೆ. ಇದರಿಂದ ಹೆರಿಗೆ ವಾರ್ಡ್ನಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಅವರು ಪಟ್ಟಿ ನೀಡಿದ ನಂತರ ಕಾಮಗಾರಿ ನಡೆಸಲಾಗುವುದು ಎಂದರು.