ಕರ್ನಾಟಕ

karnataka

ETV Bharat / state

ನಾಗರಿಕರಿಗೆ ಹೊರೆ ನೀಡದ ಉಳಿತಾಯ ಬಜೆಟ್ ಮಂಡನೆ: ಮೇಯರ್ - Shivamogga Metropolitan City budget

ಬಜೆಟ್​ನಲ್ಲಿ 2 ಕೋಟಿ 81 ಲಕ್ಷ ರೂ.ಗಳನ್ನು ಉಳಿತಾಯ ಮಾಡುವ ಮೂಲಕ ಉಳಿತಾಯ ಬಜೆಟ್ ಮಂಡಿಸಿದ್ದೇವೆ. ಪ್ರಮುಖವಾಗಿ ಗೋ ಸಂರಕ್ಷಣೆಗೆಂದು 50 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಮಾಹಿತಿ ನೀಡಿದರು.

shivamogga-metropolitan-city-budget
ಮೇಯರ್

By

Published : Apr 1, 2021, 3:17 AM IST

Updated : Apr 2, 2021, 5:29 AM IST

ಶಿವಮೊಗ್ಗ:ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಯಾವುದೇ ಹೊರೆ ನೀಡದೆ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದರು.

ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, 288 ಕೋಟಿ ರೂ. ವೆಚ್ಚದ ಬಜೆಟ್ ಮಂಡಿಸಲಾಗಿದೆ. ಈ ಬಾರಿಯ ​ಯಾವುದೇ ರೀತಿಯ ಜನಸಾಮಾನ್ಯರಿಗೆ ಹೊರೆ ನೀಡದೆ ಬಜೆಟ್ ಮಂಡಿಸಿರುವುದು ವಿಶೇಷವಾಗಿದೆ ಎಂದರು.

ನಾಗರಿಕರಿಗೆ ಹೊರೆ ನೀಡದ ಉಳಿತಾಯ ಬಜೆಟ್ ಮಂಡನೆ: ಮೇಯರ್

ಬಜೆಟ್​ನಲ್ಲಿ 2 ಕೋಟಿ 81 ಲಕ್ಷ ರೂ.ಗಳನ್ನು ಉಳಿತಾಯ ಮಾಡುವ ಮೂಲಕ ಉಳಿತಾಯ ಬಜೆಟ್ ಮಂಡಿಸಿದ್ದೇವೆ. ಪ್ರಮುಖವಾಗಿ ಗೋ ಸಂರಕ್ಷಣೆಗೆಂದು 50 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ವಿಶೇಷವಾಗಿ ಯುದ್ದದಲ್ಲಿ ನಿಷ್ಕ್ರಿಯವಾಗಿರುವ ಯುದ್ದ ಟ್ಯಾಂಕರ್ ಹಾಗೂ ಯುದ್ದ ವಿಮಾನವನ್ನು ಕೇಂದ್ರ ಸರ್ಕಾರ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆ ಯುದ್ಧ ಟ್ಯಾಂಕರ್​ ಹಾಗೂ ವಿಮಾನ ಸ್ಮಾರಕಕ್ಕೆ ಮೂರು ಲಕ್ಷ ರೂ. ಹಣ ಮೀಸಲಿಡಲಾಗಿದೆ. ಈ ಸ್ಮಾರಕವು ಯುವಕರಿಗೆ ಸೈನ್ಯದ ಸ್ಪೂರ್ತಿ ತುಂಬುವ ಸ್ಮಾರಕವಾಗಲಿದೆ ಎಂದು ತಿಳಿಸಿದರು.

ಯಾವ ಯೋಜನೆಗೆ ಎಷ್ಟು ಅನುದಾನ:

  • ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರಿಗೆ ವಸತಿ ಗೃಹ ನಿರ್ಮಾಣಕ್ಕೆ 5 ಕೋಟಿ ರೂ. ಮಿಸಲು
  • ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನಕ್ಕೆ 1 ಕೋಟಿ ರೂ.
  • ಸು-ಶಾಸನ ಭವನ ನಿರ್ಮಾಣಕ್ಕೆ 5 ಕೋಟಿ ರೂ.
  • ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ 5 ಲಕ್ಷ ರೂ.
  • ಸ್ವಚ್ಛತೆಗಾಗಿ ಹೊಸ ಯಂತ್ರಗಳು ಹಾಗೂ ಇ-ಶೌಚಾಲಯ ನಿರ್ಮಾಣಕ್ಕೆ 2 ಕೋಟಿ ರೂ.
  • ಪಾಲಿಕೆ ವ್ಯಾಪ್ತಿಯ ಕೆರೆಗಳ ಕಾಯಕಲ್ಪಕ್ಕೆ 1 ಕೋಟಿ ರೂ.
  • ಪೌರ ಕಾರ್ಮಿಕರ ಕಲ್ಯಾಣ ಯೋಜನೆಗೆ 30 ಲಕ್ಷ ರೂ.
  • ವಿಮಾ ಯೋಜನೆಗೆ 50 ಲಕ್ಷ ರೂ.
  • ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗಕ್ಕೆ 10 ಲಕ್ಷ ರೂ.
  • ಗೋವು ಸಂರಕ್ಷಣಾ ಯೋಜನೆಗೆ 50 ಲಕ್ಷ ರೂ.
  • ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಾಣಕ್ಕೆ 50 ಲಕ್ಷ ರೂ.
  • ಅಜಿತ್ ಶ್ರೀ ಸೇವಾ ಯೋಜನೆಗೆ 25 ಲಕ್ಷ ರೂ.
  • ಪಂಡಿತ್ ಧೀನ್ ದಯಾಲ್ ಹೃದಯಸ್ಪರ್ಶಿ ಯೋಜನೆಗೆ 20 ಲಕ್ಷ ರೂ.
  • ಸಾಂಸ್ಕೃತಿಕ ಸುರಕ್ಷಾ ಯೋಜನೆಗೆ 50 ಲಕ್ಷ ರೂ.
  • ಲವಕುಶ ಮಕ್ಕಳ ಕಲ್ಯಾಣ ಯೋಜನೆಗೆ 10 ಲಕ್ಷ ರೂ.
  • ಏಕಲವ್ಯ ಕ್ರೀಡಾ ಯೋಜನೆ ಕ್ರೀಡಾ ಚಟುವಟಿಕೆಗಾಗಿ 10 ಲಕ್ಷ ರೂ.
  • ಸ್ವಾಮಿ ವಿವೇಕಾನಂದ ಯುವ ಯೋಜನೆಗೆ 25 ಲಕ್ಷ ರೂ.
Last Updated : Apr 2, 2021, 5:29 AM IST

ABOUT THE AUTHOR

...view details