ಕರ್ನಾಟಕ

karnataka

ETV Bharat / state

ಶಿವಮೊಗ್ಗ : ಗಲಾಟೆ, ಗದ್ದಲದ ನಡುವೆ ಮಹಾನಗರ ಪಾಲಿಕೆ ಬಜೆಟ್ ಮಂಡನೆ - ಮಹಾನಗರ ಪಾಲಿಕೆ ಬಜೆಟ್ ಮಂಡನೆ

ಕಳೆದ ವರ್ಷ ಗೋ ಸಂರಕ್ಷಣೆಯ ಯೋಜನೆ, ಜನಪ್ರತಿನಿದಿಗಳ ಸಮಾಲೋಚನಾ ಕೊಠಡಿ ಸೇರಿ ಅನೇಕ ಯೋಜನೆಗಳಿಗೆ ಹಣ ಮೀಸಲಿಡಲಾಗಿತ್ತು. ಇನ್ನೂ ಆ ಯೋಜನೆಗಳು ಕಾರ್ಯಗತವಾಗದೆ ಕೇವಲ ಅಂಕಿ-ಅಂಶಕ್ಕಾಗಿ ಬಜೆಟ್ ಮಂಡನೆಯಾಗಿದೆ ಎಂದು ಆರೋಪಿಸಿ ಮಹಾನಗರ ಪಾಲಿಕೆ ಸಭಾಂಗಣದ ಬಾವಿಗಿಳಿದು ಪ್ರತಿಭಟಿಸಿದರು..

Shivamogga
ಗಲಾಟೆ, ಗದ್ದಲದ ನಡುವೇ ಮಹಾನಗರ ಪಾಲಿಕೆ ಬಜೆಟ್ ಮಂಡನೆ

By

Published : Mar 31, 2021, 4:32 PM IST

ಶಿವಮೊಗ್ಗ :ಗಲಾಟೆ, ಗದ್ದಲದ ನಡುವೆ ಮಹಾನಗರ ಪಾಲಿಕೆ ಬಜೆಟ್ ಇಂದು ಮಂಡನೆಯಾಗಿದೆ. ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಬಜೆಟ್ ಮಂಡಿಸಿದರು.

ಗಲಾಟೆ, ಗದ್ದಲದ ನಡುವೆ ಮಹಾನಗರ ಪಾಲಿಕೆ ಬಜೆಟ್ ಮಂಡನೆ..

ಬಜೆಟ್ ಮಂಡನೆ ವೇಳೆ 2020-21ರ ಯೋಜನೆಗಳೇ ಇನ್ನೂ ಕಾರ್ಯಗತವಾಗಿಲ್ಲ. ಹಾಗೂ ಏಕ ಪಕ್ಷಿಯ ಬಜೆಟ್ ಹಾಗೂ ಕೇವಲ ಅಂಕಿ-ಅಂಶಗಳಿಂದ ಕೂಡಿದ, ವಾಸ್ತವಿಕತೆಗೆ ದೂರವಾದ ಬಜೆಟ್‌ನ ಮಂಡಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಕಳೆದ ವರ್ಷದ ಯೋಜನೆಗಳ ನ್ಯೂನತೆ ಫಲಕಗಳನ್ನು ಹಿಡಿದು ಬಜೆಟ್ ಮಂಡನೆಗೆ ಅಡ್ಡಿಪಡಿಸಿ ಪ್ರತಿಭಟಿಸಿದರು.

ಕಳೆದ ವರ್ಷ ಗೋ ಸಂರಕ್ಷಣೆಯ ಯೋಜನೆ, ಜನಪ್ರತಿನಿದಿಗಳ ಸಮಾಲೋಚನಾ ಕೊಠಡಿ ಸೇರಿ ಅನೇಕ ಯೋಜನೆಗಳಿಗೆ ಹಣ ಮೀಸಲಿಡಲಾಗಿತ್ತು. ಇನ್ನೂ ಆ ಯೋಜನೆಗಳು ಕಾರ್ಯಗತವಾಗದೆ ಕೇವಲ ಅಂಕಿ-ಅಂಶಕ್ಕಾಗಿ ಬಜೆಟ್ ಮಂಡನೆಯಾಗಿದೆ ಎಂದು ಆರೋಪಿಸಿ ಮಹಾನಗರ ಪಾಲಿಕೆ ಸಭಾಂಗಣದ ಬಾವಿಗಿಳಿದು ಪ್ರತಿಭಟಿಸಿದರು.

ABOUT THE AUTHOR

...view details