ಕರ್ನಾಟಕ

karnataka

ETV Bharat / state

ಸ್ವಚ್ಛ ಸರ್ವೇಕ್ಷಣ 2022: ಶಿವಮೊಗ್ಗ ಮಹಾನಗರ ಪಾಲಿಕೆಗೆ ಪ್ರಥಮ ಸ್ಥಾನ - ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ

ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯು ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

shivamogga
ಶಿವಮೊಗ್ಗ ಮಹಾನಗರ ಪಾಲಿಕೆ

By

Published : Oct 1, 2022, 8:52 AM IST

ಶಿವಮೊಗ್ಗ: ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ 2022 ರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ 2022 ರ ಅಂಗವಾಗಿ ಕ್ಷೇತ್ರ ಭೇಟಿ, ಸಾರ್ವಜನಿಕ ಅಭಿಪ್ರಾಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ, ವಿನೂತನ ತಂತ್ರಜ್ಞಾನ‌ ಬಳಕೆಯಲ್ಲಿ ಪಾಲಿಕೆಯ ಕಾರ್ಯವನ್ನು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರಥಮ ಸ್ಥಾನ ನೀಡಿದೆ.

ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಹೆಚ್ಚು ಅಂಕಗಳಿಸಲು ಕೆಳಗಿನ ಅಂಶಗಳು ಕಾರಣ:

1) ಬಯೋ ಮೆಥನೇಷನ್ ಘಟಕ.

2) ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ.

3) ಹಸಿ ಮತ್ತು ಒಣ ಕಸ ವಿಂಗಡಿಸಲು ಡಸ್ಡ್ ಬಿನ್ ವಿತರಣೆ.

4) ವಾಹನ ಖರೀದಿ.

5) ಪಾರಂಪರಿಕ ತ್ಯಾಜ್ಯ ವಿಲೇವಾರಿ.

6) ಬಯಲು ಶೌಚ ಮುಕ್ತ.

7) ಕಟ್ಟಡಗಳ ಭಗ್ನಾವಶೇಷ ತ್ಯಾಜ್ಯ.

8) ಕಸಮುಕ್ತ ನಗರ.

9) ದ್ರವ ತ್ಯಾಜ್ಯ ನಿರ್ವಹಣೆ.

10) ಮ್ಯಾನುವಲ್ ಸ್ಕ್ಯಾ‌ವೆಂಜಿಗ್ ಅಳವಡಿಸಿಕೊಂಡಿರುವುದು.

11) ಪೌರ ಕಾರ್ಮಿಕರಿಗೆ ಬೆಳಗ್ಗೆ ತಿಂಡಿ ವಿತರಣೆ ಹೀಗೆ ಅನೇಕ ‌ ನಿಗಮ ರಚನೆ ಮಾಡಲಾಗಿದೆ.

ಸೆಪ್ಟೆಂಬರ್ 1 ರಂದು ರಾಷ್ಟ್ರಪಯವರು ಪ್ರಶಸ್ತಿ ನೀಡಲಿದ್ದಾರೆ. ಪ್ರಶಸ್ತಿಯನ್ನು ಪಡೆಯಲು ಮೇಯರ್, ಆಯುಕ್ತರು, ರಾಜ್ಯ ಸಚಿವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಸ್ವಚ್ಛತೆಯಲ್ಲಿ ಗಮನ ಸೆಳೆದ ನಾಗಮಂಗಲ ಪುರಸಭೆ: ರಾಜ್ಯಕ್ಕೇ 5ನೇ ಸ್ಥಾನ

ABOUT THE AUTHOR

...view details