ಕರ್ನಾಟಕ

karnataka

ETV Bharat / state

ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು: ವ್ಯಕ್ತಿ ಬಂಧನಕ್ಕೆ ಆರಗ ವಿರೋಧ - ಅರಣ್ಯ ಇಲಾಖೆ

Shivamogga forest officers: ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆ ಪ್ರಸನ್ನ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

MLA Araga Gyanendra advised.
ಅರಣ್ಯಾಧಿಕಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

By ETV Bharat Karnataka Team

Published : Nov 1, 2023, 3:40 PM IST

Updated : Nov 1, 2023, 4:20 PM IST

ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಶಿವಮೊಗ್ಗ:ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿಗಳ ಚರ್ಮ, ಕೊಂಬು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಸಂಗ್ರಹ ಮಾಡುವುದು ಅಪರಾಧವಾಗಿದೆ. ಈ ರೀತಿ ಸಂಗ್ರಹಿಸಿದ್ದರೆ ಅಂತಹವರನ್ನು ಬಂಧಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ.

ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಇಂದು ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆ ಪ್ರಸನ್ನ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಸವನಗದ್ದೆ ಪ್ರಸನ್ನ ಎಂಬಾತನಿಂದ ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ.

ವನ್ಯಜೀವಿ ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಆರೋಪದಡಿ ಪ್ರಸನ್ನ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯಾಧಿಕಾರಿಗಳ ಕ್ರಮವನ್ನು ವಿರೋಧಿಸಿದರು. ಅಲ್ಲದೆ ಪ್ರಸನ್ನ ಅವರಿಗೆ ವಯಸ್ಸಾಗಿದೆ, ಅವರನ್ನು ಬಂಧಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅರಣ್ಯ ಇಲಾಖೆಯ ಪಿಸಿಸಿಎಫ್ ಸೇರಿದಂತೆ ಮೇಲಾಧಿಕಾರಿಗಳ ಜೊತೆ ಆರಗ ಜ್ಞಾನೇಂದ್ರ ಮೊಬೈಲ್​ನಲ್ಲಿ ಮಾತನಾಡಿ, ಪ್ರಸನ್ನ ಅವರನ್ನು ಬಂಧಿಸದಂತೆ ಸೂಚಿಸಿದರು. ಒಂದು ವೇಳೆ ಆತನನ್ನು ಬಂಧನ ಮಾಡಿದ್ರೆ, ಪ್ರತಿಭಟನೆ ನಡೆಸುವುದಾಗಿ ಹಾಗೂ ಅವರ ಜೊತೆ ತಮ್ಮನ್ನು ಕೂಡ ಬಂಧಿಸುವಂತೆ ಅಡ್ಡಿಪಡಿಸಿದರು. ಬಂಧಿಸಲು ಬಂದಿದ್ದ ಎಸಿಎಫ್ ಅವರ ತಂಡ ಕಾಡುಕೋಣ ಹಾಗೂ ಜಿಂಕೆಯ ಕೊಂಬುಗಳನ್ನು ಮಾತ್ರ ವಶಕ್ಕೆ ಪಡೆದು ವಾಪಸ್​ ಹೋದರು.

ಸಿಕ್ಕ ಪ್ರಾಣಿ ಕೊಂಬುಗಳು ನೂರಾರು ವರ್ಷ ಹಳೆಯವು:ಅಲ್ಲದೆ ವಯಸ್ಸಾದ ಪ್ರಸನ್ನ ಅವರು ತುಂಬ ಸಜ್ಜನಿಕೆಯ ವ್ಯಕ್ತಿ. ಅವರ ಕುಟುಂಬ ಈ ಭಾಗದಲ್ಲಿ ಪ್ರಸಿದ್ಧಿಯಾಗಿದೆ. ಅವರ ಮನೆಯಲ್ಲಿ ಸಿಕ್ಕ ಪ್ರಾಣಿಗಳ ಕೊಂಬುಗಳು ನೂರಾರು ವರ್ಷದಷ್ಟು ಹಿಂದಿನವು. ಈ ಕುಟುಂಬ ಬೇಟೆಯಾಡುವುದಿಲ್ಲ. ಅವರು ಮನೆ ಬಳಿ ಬಂದ ಮಂಗಳನ್ನು ಬೆದರಿಸುತ್ತಾರೆ ಬಿಟ್ಟರೆ, ಬೇರೆ ಏನನ್ನು ಮಾಡುವುದಿಲ್ಲ‌. ಇಂತಹವರನ್ನು ಬಂಧಿಸಲು ಆಗಮಿಸಿದ್ದು ಖಂಡನೀಯವಾಗಿದೆ. ಅರಣ್ಯಾಧಿಕಾರಿಗಳು ತಮ್ಮ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಕನ್ನಡ ಬಿಗ್​ ಬಾಸ್ ಸ್ಪರ್ಧಿ ಸಂತೋಷ್ ಅವ​ರನ್ನು ಹುಲಿ ಉಗುರು ಧರಿಸಿರುವ ಹಿನ್ನೆಲೆ ಇತ್ತೀಚಿಗೆ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ರಾಜಕಾರಣಿಗಳ ಮಕ್ಕಳು ಹುಲಿ ಉಗುರು ಧರಿಸಿದ್ದರೂ, ಅವರನ್ನು ಕೇವಲ ವಿಚಾರಣೆ ಮಾಡುತ್ತಾರೆ. ಆದರೆ ಸಾಮಾನ್ಯ ಜನ ಧರಿಸಿದರೆ ಅವರನ್ನು ಅರೆಸ್ಟ್ ಮಾಡುವುದು ಸರಿಯಲ್ಲ. ಇದರಿಂದ ಅರಣ್ಯ ಇಲಾಖೆಯವರು ತಮ್ಮ ಧೋರಣೆಯನ್ನು ಬದಲಾಯಿಸುವುದು ಉತ್ತಮ ಎಂದು ಮಾಜಿ ಸಚಿವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.

ಇದನ್ನೂ ಓದಿ:ಪೂರ್ವಜರಿಂದ ಬಂದಿರುವ ಬೇಟೆಯಾಡಿದ ಪ್ರಾಣಿಗಳ ಉತ್ಪನ್ನ ಬಳಕೆ ಅಪರಾಧವಲ್ಲ: ಸಿಎಂ ಸಲಹೆಗಾರ ಎ.ಎಸ್.​ಪೊನ್ನಣ್ಣ

Last Updated : Nov 1, 2023, 4:20 PM IST

ABOUT THE AUTHOR

...view details