ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಕ್ವಾಟರ್ಸ್ ಅನ್ನು ಜಿಲ್ಲಾಡಳಿತ ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದೆ. ಪೊಲೀಸ್ ವಸತಿ ಸಮುಚ್ಚಯದ ಸಿಬ್ಬಂದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾಡಳಿತ ಸಂಪೂರ್ಣ ಕ್ವಾಟರ್ಸ್ ಅನ್ನು ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ.
ಶಿವಮೊಗ್ಗ ಪೊಲೀಸ್ ಕ್ವಾಟರ್ಸ್ ಕಂಟೇನ್ಮೆಂಟ್ ಝೋನ್ಗೆ ಡಿಸಿ ಭೇಟಿ - Shimoga Corona case
ಪೊಲೀಸ್ ಸಿಬ್ಬಂದಿ ಒಬ್ಬರಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೆ ಇಡೀ ಪೊಲೀಸ್ ಕ್ವಾಟರ್ಸ್ ಅನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಝೋನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಪೊಲೀಸ್ ಕ್ವಾಟರ್ಸ್ ಕಂಟೇನ್ಮೆಂಟ್ ಝೋನ್ಗೆ ಡಿಸಿ ಭೇಟಿ
ಕಂಟೇನ್ಮೆಂಟ್ ಝೋನ್ ಘೋಷಣೆ ಮಾಡಿದ ಮೇಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝೋನ್ನಲ್ಲಿ ಇರುವವರು ಹೊರಗೆ ಬರುವಂತಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ಪೊರೈಕೆ ಮಾಡಲಾಗುತ್ತದೆ. ನಿತ್ಯ ಸ್ಯಾನಿಟೈಸ್ ಮಾಡಲಾಗುತ್ತದೆ. ಅಲ್ಲದೇ ಈ ಝೋನ್ ಮುಂದಿನ 28 ದಿನ ಮುಂದುವರಿಯಲಿದೆ ಎನ್ನಲಾಗಿದೆ.