ಶಿವಮೊಗ್ಗ:ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಸೇರಿದಂತೆ 16 ಮಂದಿಗೆ ಶಿವಮೊಗ್ಗ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಭದ್ರಾವತಿಯಲ್ಲಿ ಫೆಬ್ರವರಿ 28 ರಂದು ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಗಲಾಟೆಯಲ್ಲಿ ಶಾಸಕರ ಪುತ್ರ ಬಸವೇಶ್ ಹಾಗೂ ಶಾಸಕರ ಸಹೋದರರ ಪುತ್ರ ಸೇರಿ ಇತರ 16 ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ಮಾರ್ಚ್ 6 ರಂದು ಶಾಸಕರ ಪುತ್ರ ಬಸವೇಶ್ನನ್ನು ಪೊಲೀಸರು ಬಂಧಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಇದನ್ನೂ ಓದಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅರೆಸ್ಟ್
ಬಸವೇಶ್ ಹಾಗೂ ಇತರರು ಎರಡ್ಮೂರು ಭಾರಿ ಜಾಮೀನು ಅರ್ಜಿ ಹಾಕಿದ್ದರೂ ನ್ಯಾಯಾಲಯ ಜಾಮೀನು ನೀಡಿರಲಿಲ್ಲ. ಇಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 45 ದಿನಗಳ ನಂತರ ಜಾಮೀನು ಲಭ್ಯವಾಗಿದೆ.