ಕರ್ನಾಟಕ

karnataka

ETV Bharat / state

ಸೋನಿಯಾ ವಿರುದ್ಧದ ಎಫ್​ಐಆರ್​ ರದ್ದತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ - congress protest news

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪವಾದ ವಿಚಾರವನ್ನು ತೆಗೆದುಕೊಂಡು ದೂರು ದಾಖಲಿಸುವುದು ಸರಿಯಲ್ಲ. ಎಐಸಿಸಿ‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲು ಮಾಡಿರುವುದು ದುರುದ್ದೇಶದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

shivamogga-congress-protest
ಕಾಂಗ್ರೆಸ್ ಪ್ರತಿಭಟನೆ

By

Published : May 22, 2020, 8:28 PM IST

ಶಿವಮೊಗ್ಗ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ದಾಖಲಾದ ಎಫ್​ಐಆರ್​ ಅನ್ನು ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪವಾದ ವಿಚಾರವನ್ನು ತೆಗೆದುಕೊಂಡು ದೂರು ದಾಖಲಿಸುವುದು ಸರಿಯಲ್ಲ. ಎಐಸಿಸಿ‌ ಅಧ್ಯಕ್ಷೆಯ ವಿರುದ್ಧ ದೂರು ದಾಖಲು ಮಾಡಿರುವುದು ದುರುದ್ದೇಶದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಸಾಗರದ ಪೊಲೀಸ್ ಇನ್ಸ್​ಪೆಕ್ಟರ್ ಮಹಾಬಲೇಶ್ವರ್ ನಾಯಕ್​ ಅವರು ಯಾರದೋ ಅಮೀಷಕ್ಕೆ ಒಳಗಾಗಿ ದೂರು ದಾಖಲು ಮಾಡಿಕೊಂಡಿದ್ದಾರೆ. ದೂರು ನೀಡಿದ ತಕ್ಷಣ ಅದನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಸೂಕ್ತ. ಇಲ್ಲಿ ಮಹಾಬಲೇಶ್ವರ್ ನಾಯಕ್ ಅವರು ಒಂದು ಪಕ್ಷದ ಅಮಿಷಕ್ಕೆ ಒಳಗಾಗಿದ್ದಾರೆ. ದಾಖಲಾದ ಎಫ್​ಐಆರ್ ರದ್ದುಪಡಿಸಿ, ನಾಯಕ್​ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸಾಗರದ ವಕೀಲ ಪ್ರವೀಣ್ ಅವರು ದೂರು ನೀಡಿದ್ದು ಸರಿಯಲ್ಲ. ತಕ್ಷಣವೇ ಎಫ್​ಐಆರ್​ ರದ್ದು‌ಪಡಿಸದಿದ್ದರೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.

ABOUT THE AUTHOR

...view details