ಶಿವಮೊಗ್ಗ: ಹೋರಿಗಳಲ್ಲಿಯೇ ಅತಿ ದುಬಾರಿ ಹಾಗೂ ಚಾಂಪಿಯನ್ ಆಗಿದ್ದ ಚಾಮುಂಡಿ ಎಕ್ಸ್ಪ್ರೆಸ್ ಎಂದು ಖ್ಯಾತಿ ಪಡೆದಿದ್ದ ಹೋರಿ ಸಾವನ್ನಪ್ಪಿದೆ. ಚಾಮುಂಡಿ ಎಕ್ಸ್ಪ್ರೆಸ್ ಅನಾರೋಗ್ಯದಿಂದ ನಿಧನವಾಗಿದೆ ಎಂದು ತಿಳಿದುಬಂದಿದೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯಾರ ಕೈಗೂ ಸಿಗದೇ ಓಡಿ ಎಕ್ಸ್ಪ್ರೆಸ್ ಎಂಬ ಖ್ಯಾತಿಗೆ ಒಳಗಾಗಿತ್ತು. ಈ ಸ್ಪರ್ಧೆಯ ಅಭಿಮಾನಿಗಳು ಚಾಮುಂಡಿಯ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದರು. ಅನಾರೋಗ್ಯದ ಕಾರಣದಿಂದ ಚಾಮುಂಡಿ ಎಕ್ಸ್ಪ್ರೆಸ್ ತನ್ನ ಮಿಂಚಿನ ಓಟವನ್ನು ನಿಲ್ಲಿಸಿದೆ. ಸ್ಪರ್ಧೆಯ ಅಭಿಮಾನಿಗಳು ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ.