ಶಿವಮೊಗ್ಗ: ಜೀವನದಲ್ಲಿ ಮದುವೆಯ ಸಂಭ್ರಮ ಒಮ್ಮೆ ಮಾತ್ರ ಸಿಗುವುದೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲು ಯೋಚಿಸುವ ಈ ಕಾಲದಲ್ಲಿ, ಸರಳ ಮದುವೆಯಾಗುವ ಆಲೋಚನೆ ಮಾಡಿದ್ದಾರೆ. ಜೊತೆಗೆ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದಾರೆ.
ಸರಳ ಮದುವೆಯಾಗುವ ಚಿಂತನೆ: ತಾನು ಓದಿದ ಸರ್ಕಾರಿ ಶಾಲೆಗೆ 1 ಲಕ್ಷ ರೂ ದೇಣಿಗೆ ನೀಡಿದ ಯುವತಿ - ಸರ್ಕಾರಿ ಶಾಲೆಗ ಲಕ್ಷರೂ ದೇಣಿಗೆ ನೀಡಿದ ವಧು
ಹೊನ್ನೆತಾಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದಿದ್ದ ಚೇತನಾ, ತಾನು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆಯಿಂದ ಒಂದು ಲಕ್ಷ ರೂ ಚೆಕ್ ನೀಡಿದ್ದಾರೆ.
ತೀರ್ಥಹಳ್ಳಿ ತಾಲೂಕು ಮನಸ್ಸುಗಾರ ಗ್ರಾಮದ ಟೀಕಪ್ಪ ಗೌಡರವರ ಪುತ್ರಿ ಚೇತನಾ ಎಂಬುವವರೇ ಈ ಉತ್ತಮ ನಿರ್ಧಾರ ತೆಗೆದುಕೊಂಡಿರುವ ಯುವತಿ. ಇವರು ದುಂದುವೆಚ್ಚದ ಮದುವೆ ಬದಲು ತನ್ನ ಮದುವೆಯನ್ನು ಸರಳವಾಗಿ ಆಚರಿಸಿ ಕೊಳ್ಳಲು ನಿರ್ಧರಿಸಿ, ಮನೆಯವರು ಮದುವೆಗೆಂದು ಇಟ್ಡಿದ್ದ 1 ಲಕ್ಷ ರೂ ಹಣವನ್ನು ತಾನೂ ಓದಿದ ಸರ್ಕಾರಿ ಶಾಲೆಯ ಅಭಿವೃದ್ದಿಗೆ ನೀಡಿದ್ದಾರೆ.
ಹೊನ್ನೆತಾಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದಿದ್ದ ಚೇತನಾ, ತಾನು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆಯಿಂದ ಒಂದು ಲಕ್ಷ ರೂ ಚೆಕ್ ನೀಡಿದ್ದಾರೆ. ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಹಾಗೂ ನಿತ್ಯಾನಂದ ಎನ್ನುವವರು ಈ ಚೆಕ್ ಸ್ವೀಕರಿಸಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ನಿರ್ಧರಿಸಿದ್ದಾರೆ.