ಶಿವಮೊಗ್ಗ:ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುತ್ತಿದ್ದ ಜನಶತಾಬ್ದಿ ರೈಲು ಜ.31 ರಿಂದ ಬೆಳಗ್ಗೆ 5.15 ಕ್ಕೆ ಹೊರಡುತ್ತದೆ. ಮತ್ತು ಯಶವಂತಪುರ ಬದಲಿಗೆ ಮೆಜೆಸ್ಟಿಕ್ ತಲುಪುತ್ತದೆ.
ಇನ್ಮುಂದೆ ಯಶವಂತಪುರ ಬದಲಿಗೆ ಮೆಜೆಸ್ಟಿಕ್ನಿಂದ ಸಂಜೆ 5.15ಕ್ಕೆ ಹೊರಡುತ್ತದೆ. ಪ್ರಯಾಣಿಕರು ಬದಲಾಗಿರುವ ಸಮಯವನ್ನು ಗಮನಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಸಮಯದ ಬದಲಾವಣೆಯಿಂದ ಮೆಜೆಸ್ಟಿಕ್ ತಲುಪಲಿದೆ:
ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಜನಶತಾಬ್ದಿ ರೈಲು ಬೆಳಗ್ಗೆ 5.30ರ ಬದಲಿಗೆ ಬೆಳಗ್ಗೆ 5.15ಕ್ಕೆ ಹೊರಡಲಿದೆ. ಸಂಜೆ 5.15 ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡಲಿದೆ. ಜನ ಶತಾಬ್ದಿ ರೈಲು ಸಮಯದ ಬದಲಾವಣೆಯೊಂದಿಗೆ ಶಿವಮೊಗ್ಗದಿಂದ ಮೆಜೆಸ್ಟಿಕ್ಗೆ ತಲುಪಲಿದೆ.
ಓದಿ:ಶಿವಮೊಗ್ಗ-ಬೆಂಗಳೂರು ರೈಲು ನಿಲುಗಡೆ ಸಮಯದಲ್ಲಿ ಬದಲಾವಣೆ : ಬಿ.ವೈ.ರಾಘವೇಂದ್ರ
ಮೊದಲು ಯಶವಂತಪುರದಲ್ಲಿ ನಿಲ್ಲುತ್ತಿದ್ದ ರೈಲು ಇನ್ಮುಂದೆ ಮೆಜೆಸ್ಟಿಕ್ ತಲುಪಲಿದೆ. ಸಂಜೆ ಪುನಃ ಮೆಜೆಸ್ಟಿಕ್ನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಸಂಸದರು ತಿಳಿಸಿದ್ದಾರೆ.