ಕರ್ನಾಟಕ

karnataka

ETV Bharat / state

ಶಿವಮೊಗ್ಗ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ - ಯುವಕನಿಗೆ ಇರಿದ ದುಷ್ಕರ್ಮಿಗಳು

ಶಿವಮೊಗ್ಗ ಹಲ್ಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಹಲ್ಲೆ ಪ್ರಕರಣ
ಶಿವಮೊಗ್ಗ ಹಲ್ಲೆ ಪ್ರಕರಣ

By

Published : Oct 25, 2022, 9:09 PM IST

ಶಿವಮೊಗ್ಗ: ಸೋಮವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಹಲ್ಲೆ, ಬೆದರಿಕೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಕೆಟ್ ಫೌಜಾನ್, ಅಝರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತರು. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಎರಡು ಬೈಕ್​​ಗಳಲ್ಲಿ ರಾತ್ರಿ 11 ಗಂಟೆಗೆ ಸೀಗೆಹಟ್ಟಿಗೆ ಐವರು ಆರೋಪಿಗಳು ತೆರಳಿ ಬೆದರಿಕೆ ಹಾಕಿದ್ದರು. ಈ ವೇಳೆ ಪ್ರವೀಣ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು.

(ಓದಿ: ಶಿವಮೊಗ್ಗ: ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ ಕೊಲೆ )

ಪ್ರವೀಣ್ ಮತ್ತು ಪ್ರಕಾಶ್ ಎಂಬುವವರು ಕೆಲ ದಿನಗಳ ಹಿಂದೆ ಫೌಜಾನ್​​ಗೆ ಬೈದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಎಚ್ಚರಿಕೆ ನೀಡಲು ಆರೋಪಿಗಳು ಆಗಮಿಸಿದ್ದರು. ಬಂಧಿತರ ವಿರುದ್ಧ ಈಗಾಗಲೇ ಹಲವು ಕೇಸುಗಳಿವೆ ಎಂದು ತಿಳಿದುಬಂದಿದೆ.

(ಓದಿ: ಸಮಾಜಘಾತುಕರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ: ಹರ್ಷನ ಸಹೋದರಿ ಅಶ್ವಿನಿ ಮನವಿ)

ABOUT THE AUTHOR

...view details