ಶಿವಮೊಗ್ಗ :ಮುಂಗಾರು ಬಿತ್ತನೆಗೆ ಕೃಷಿ ಇಲಾಖೆ ಎಲ್ಲ ರೀತಿಯಲ್ಲೂ ಸಿದ್ದವಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್ ತಿಳಿಸಿದರು.
ಮುಂಗಾರು ಬಿತ್ತನೆಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ: ಡಾ. ಕಿರಣ್ ಕುಮಾರ್ - latest news in shivamogga
ಶಿವಮೊಗ್ಗ ಜಿಲ್ಲೆಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಐದು ಎಕರೆ ಒಳಗಡೆ ಭೂಮಿ ಹೊಂದಿರುವ ರೈತರಿಗೆ ಸಬ್ಸಿಡಿ ಮೂಲಕ ನೀಡಲಾಗುತ್ತದೆ ಎಂದರು.
ಈ ಟಿವಿ ಭಾರತ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 1.48.333 ಹೆಕ್ಟರ್ ಬಿತ್ತನೆ ಗುರಿ ಹೊಂದಿದ್ದೇವೆ. ಅದರಲ್ಲಿ ಭತ್ತ 90 ಹೇಕ್ಟರ್, ಮುಸಕಿನ ಜೋಳ 50 ಹೇಕ್ಟರ್, ಹತ್ತಿ, ತೊಗರಿ, ಅಲಸಂಧಿ ಸೇರಿದಂತೆ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಐದು ಎಕರೆ ಒಳಗಡೆ ಭೂಮಿ ಹೊಂದಿರುವ ರೈತರಿಗೆ ಸಬ್ಸಿಡಿ ಮೂಲಕ ನೀಡಲಾಗುತ್ತದೆ ಎಂದರು.
7 ಸಾವಿರದ 9 ಕ್ವಿಂಟಾಲ್ ಬೀಜಗಳ ದಾಸ್ತಾನು ಇದ್ದು, ಯಾವುದೇ ಕೂರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ 84.435 ಮೆಟ್ರಿಕ್ ಟನ್ನಷ್ಟು ರಸಗೊಬ್ಬರ ಅವಶ್ಯಕತೆ ಇದೆ. ಹಾಗಾಗಿ ರಸಗೊಬ್ಬರ ಸಹ ಕೂರತೆ ಆಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.