ಕರ್ನಾಟಕ

karnataka

ETV Bharat / state

ಗಣರಾಜ್ಯೋತ್ಸವ ಪರೇಡ್.. ​ಸ್ತಬ್ಧ ಚಿತ್ರಕ್ಕೆ ಮಲೆನಾಡಿನ ರಂಗಾಯಣ ಕಲಾವಿದರು ಆಯ್ಕೆ - shivamoga Rangayana artist selected to republic parade at delhi

ಜನವರಿ 26ರಂದು ನಡೆಯಲಿರುವ ಪರೇಡ್‍ನಲ್ಲಿ ಭಾಗವಹಿಸಲು ಜನವರಿ 10ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ 10 ದಿನಗಳ ಕಾಲ ರಿಹರ್ಸಲ್‌ನಲ್ಲಿ ಕಲಾವಿದರು ಭಾಗಿಯಾಗಲಿದ್ದು, ರಾಜ್ಯವನ್ನು ಪ್ರತಿನಿಧಿಸಿ ತೆರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ..

shivamoga-rangayana-artist-selected-to-republic-parade-at-delhi
ಗಣರಾಜ್ಯೋತ್ಸವ ಸ್ತಬ್ಧ ಚಿತ್ರಕ್ಕೆ ರಂಗಾಯಣ ಕಲಾವಿದರು ಆಯ್ಕೆ

By

Published : Jan 8, 2021, 9:05 PM IST

ಶಿವಮೊಗ್ಗ :ಗಣರಾಜ್ಯೋತ್ಸವ ಎಂಬುದು ದೇಶದ ಹೆಮ್ಮೆಯ ಪ್ರತೀಕ. ಅಂತಹ ಪರೇಡ್‌ನಲ್ಲಿ ಭಾಗವಹಿಸಬೇಕು ಎಂಬುದು ಹಲವರ ಕನಸಾಗಿದ್ದರೂ ಬಹುಪಾಲು ಜನರಿಗೆ ಅಂತಹ ಅವಕಾಶವೇ ದೊರೆಯುವುದಿಲ್ಲ. ಆದರೆ, ಜಿಲ್ಲೆಯ ರಂಗತಂಡವೊಂದಕ್ಕೆ ಇದೀಗ ಅಂತಹ ಅವಕಾಶ ಲಭ್ಯವಾಗಿದೆ.

ಸಂದೇಶ್ ಜವಳಿ ಪ್ರತಿಕ್ರಿಯಿಸಿದ್ದಾರೆ

ಈ ಬಾರಿಯ ನವದೆಹಲಿಯ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ರಾಜ್ಯದ ಸ್ತಬ್ಧಚಿತ್ರದಲ್ಲಿ ಭಾಗವಹಿಸಲು ಶಿವಮೊಗ್ಗ ರಂಗಾಯಣದ ಕಲಾವಿದರು ಆಯ್ಕೆಯಾಗಿದ್ದಾರೆ.

ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿರುವ ಸ್ತಬ್ಧ ಚಿತ್ರದಲ್ಲಿ ಭಾಗವಹಿಸಲು ಜಿಲ್ಲೆಯ ರಂಗಾಯಣದ ಕಲಾವಿದರು ಆಯ್ಕೆಯಾಗಿದ್ದಾರೆ. ವಿಜಯ ನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧಚಿತ್ರಕ್ಕೆ ಇಲ್ಲಿನ 12 ಕಲಾವಿದರು ಜೀವ ತುಂಬಲಿದ್ದಾರೆ.

ಓದಿ:ಬಸ್​ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ ಇಡೋಕಾಗದಷ್ಟು ದಾರಿದ್ರ್ಯ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಗೆ!

ಜಿಲ್ಲೆಯ ರಂಗಾಯಣದ ಕಲಾವಿದರಾದ ಪ್ರಸನ್ನ ಕುಮಾರ್ ಆರ್, ನಿತಿನ್ ಡಿ ಆರ್, ರವಿಕುಮಾರ್ ಎಸ್ ಎಮ್, ಸುಜಿತ್ ಕಾರ್ಕಳ, ಚಂದನ್ ಎನ್, ಶರತ್ ಬಾಬು ಎಂ ಎಲ್, ಮಹಾಬಲೇಶ್ವರ್ ಬಿ ಕೆ, ಸವಿತಾ ಆರ್ ಕಾಳಿ, ರಮ್ಯ ಆರ್, ರಂಜಿತ ಆರ್, ದೀಪ್ತಿ ಎಂ ಹೆಚ್, ಕಾರ್ತಿಕ್ ಆಯ್ಕೆಯಾಗಿದ್ದಾರೆ.

ಜನವರಿ 26ರಂದು ನಡೆಯಲಿರುವ ಪರೇಡ್‍ನಲ್ಲಿ ಭಾಗವಹಿಸಲು ಜನವರಿ 10ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ 10 ದಿನಗಳ ಕಾಲ ರಿಹರ್ಸಲ್‌ನಲ್ಲಿ ಕಲಾವಿದರು ಭಾಗಿಯಾಗಲಿದ್ದು, ರಾಜ್ಯವನ್ನು ಪ್ರತಿನಿಧಿಸಿ ತೆರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗಣರಾಜೋತ್ಸವ ಪರೇಡ್‌ನಲ್ಲಿ ರಾಜ್ಯ ಪ್ರತಿನಿಧಿಸಲು ಮಲೆನಾಡಿನ ಕಲಾವಿದರು ತೆರಳುತ್ತಿರುವುದು ನಿಜಕ್ಕೂ ಸಂತಸ.

For All Latest Updates

TAGGED:

ABOUT THE AUTHOR

...view details