ಕರ್ನಾಟಕ

karnataka

ETV Bharat / state

ಅರುಣ್ ಜೇಟ್ಲಿ ನಿಧನಕ್ಕೆ ಶಿವಮೊಗ್ಗ ಬಿಜೆಪಿ‌ ಕಚೇರಿಯಲ್ಲಿ ಸಂತಾಪ - ದೇಶದ ಏಕ ರೂಪ ತೆರಿಗೆ

ಶಿವಮೊಗ್ಗದಲ್ಲಿಂದು ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ರವರ ನಿಧನಕ್ಕೆ ಜಿಲ್ಲಾ ಬಿಜೆಪಿ‌ ಕಚೇರಿಯಲ್ಲಿ ಸಂತಾಪ ಸೂಚಿಸಲಾಗಿದ್ದು, ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಪಕ್ಷದ ಎಲ್ಲಾ ಮುಖಂಡರು ಅರ್ಪಿಸಿದರು.

ಅರುಣ್ ಜೆಟ್ಲಿ ನಿಧನಕ್ಕೆ ಶಿವಮೊಗ್ಗ ಬಿಜೆಪಿ‌ ಕಚೇರಿಯಲ್ಲಿ ಸಂತಾಪ

By

Published : Aug 25, 2019, 2:51 PM IST

Updated : Aug 25, 2019, 3:29 PM IST

ಶಿವಮೊಗ್ಗ:ಕೇಂದ್ರ ಸರ್ಕಾರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ‌ ಕಚೇರಿಯಲ್ಲಿ ಸಂತಾಪ ಸೂಚಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಪಕ್ಷದ ಮುಖಂಡರು ಅರ್ಪಿಸಿದ್ದರು.

ಅರುಣ್ ಜೇಟ್ಲಿ ಜಿಎಸ್​ಟಿ ಜಾರಿಗೆ ತರುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೂಡುಗೆಯನ್ನು ನೀಡಿದ್ದಾರೆ. ಅಲ್ಲದೆ ದೇಶ ಕಂಡ ಅತ್ತ್ಯುತ್ತಮ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಇವರನ್ನು ಕಳೆದುಕೊಂಡಿದ್ದು, ದೇಶಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದಾರೆ ಎಂದು ಮುಖಂಡರು ಸ್ಮರಿಸಿದರು.

ಅರುಣ್ ಜೆಟ್ಲಿ ಶಿವಮೊಗ್ಗ ಭೇಟಿಯ ನೆನಪು:

ಅರುಣ್ ಜೇಟ್ಲಿ ಅವರು 2013 ರಲ್ಲಿ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದರು. ಅಂದು ಬಿಜೆಪಿಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು. ಇದೇ ವೇಳೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.

ಅರುಣ್ ಜೆಟ್ಲಿ ನಿಧನಕ್ಕೆ ಶಿವಮೊಗ್ಗ ಬಿಜೆಪಿ‌ ಕಚೇರಿಯಲ್ಲಿ ಸಂತಾಪ

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆಯನೂರು ಮಂಜುನಾಥ್, ಮೇಯರ್ ಲತಾ ಗಣೇಶ್, ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Last Updated : Aug 25, 2019, 3:29 PM IST

ABOUT THE AUTHOR

...view details