ಕರ್ನಾಟಕ

karnataka

ETV Bharat / state

ಶಿರಾಳಕೊಪ್ಪ ಬಳಿ ಉದ್ಬವ ಈಶ್ವರ ಲಿಂಗ ಪತ್ತೆ - Shivalinga detection at Donagudda in Shimoga

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ದೋಣನಗುಡ್ಡದ ಬಳಿ ಉದ್ಬವ ಈಶ್ವರ ಲಿಂಗ ಪತ್ತೆಯಾಗಿದೆ.

ಶಿವಮೊಗ್ಗದಲ್ಲಿ ಉದ್ಬವ ಲಿಂಗ ಪತ್ತೆ

By

Published : Nov 24, 2019, 10:47 PM IST

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ದೋಣನಗುಡ್ಡದ ಬಳಿ ಉದ್ಬವ ಈಶ್ವರ ಲಿಂಗ ಪತ್ತೆಯಾಗಿದೆ.

ಹೋರಿ ಹುಡುಕಲು ಹೋದ ವ್ಯಕ್ತಿಗೆ ಪೂದೆಯಲ್ಲಿ ದುಂಡಾಗಿರುವ ಕಲ್ಲು ಕಂಡಿದ್ದು ನಂತರ ಅವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಈಶ್ವರ ಲಿಂಗವನ್ನು ಹೊರತೆಗೆಯಲಾಗಿದೆ. ಲಿಂಗದ ಪಾಣಿಪೀಠ ಬೆಳಚು ಕಲ್ಲಿನಿಂದ ಕೂಡಿದ್ದು, ಮೇಲಿನ ಲಿಂಗ ಮ್ಯಾಂಗನೀಸ್ ಕಲ್ಲಿನಂತಿದೆ.

ಇದೊಂದು ನೈಸರ್ಗಿಕ ರಚನೆಯಾಗಿರುವ ಕಲ್ಲು. ಮೂರ್ತಿ ಕೆತ್ತಲು ಇಂತಹ ಕಲ್ಲನ್ನು ಶಿಲ್ಪಿಗಳು ಉಪಯೋಗಿಸುವುದಿಲ್ಲ. ಹಾಗಾಗಿ ಇದೊಂದು ನೈಸರ್ಗಿಕ ಲಿಂಗರೂಪದ ಕಲ್ಲಾಗಿದೆ ಎಂದು ಇತಿಹಾಸ ತಜ್ಞ ರಮೇಶ್ ಹಿರೆಜಂಬೂರು ತಿಳಿಸಿದ್ದಾರೆ.

ABOUT THE AUTHOR

...view details