ಕರ್ನಾಟಕ

karnataka

ETV Bharat / state

ಕರ್ತವ್ಯ ಲೋಪ: ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು - corona virus

ಶಿಕಾರಿಪುರ ತಹಶೀಲ್ದಾರ್ ಕವಿರಾಜ್ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಈ ಮೂಲಕ ಕೊರೊನಾ ವೈರಸ್ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದವರಿಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.

ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

By

Published : Mar 31, 2020, 12:57 PM IST

ಶಿವಮೊಗ್ಗ:ದೇಶದೆಲ್ಲೆಡೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸದೆ ಕರ್ತವ್ಯ‌ಲೋಪ ಎಸಗಿ, ಕೇಂದ್ರ ಸ್ಥಾನದಲ್ಲಿರದೆ ಬೇರೆಡೆಯಿದ್ದ ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇವೆಯಿಂದ ಅಮಾನತು ಮಾಡಿ‌ದ್ದಾರೆ.

ಶಿರಾಳಕೊಪ್ಪ ಪಟ್ಟಣ ಪಂಚಾಯತ್​ನ ಮುಖ್ಯಾಧಿಕಾರಿ ಹನುಂತಪ್ಪ ಮಣ್ಣವಡ್ಡರ್​ ಅಮಾನತುಗೊಂಡವರು. ಇವರು ಶಿಕಾರಿಪುರ‌ ತಹಶಿಲ್ದಾರ್ ಆದೇಶಿದಂತೆ ಕೊರೊನಾ ವೈರಸ್ ಬಗ್ಗೆ ಪಟ್ಟಣದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಲ್ಲದೆ, ಕೇಂದ್ರ ಸ್ಥಾನ‌ ಶಿರಾಳಕೊಪ್ಪದಲ್ಲಿರದೆ, ಹಾವೇರಿಯಲ್ಲಿ ಓಡಾಟ ನಡೆಸುತ್ತಿದ್ದರೆಂಬ ಆರೋಪದ‌ ಮೇರೆಗೆ ಜಿಲ್ಲಾಧಿಕಾರಿ ಅಮಾನತು ಶಿಕ್ಷೆ ವಿಧಿಸಿದ್ದಾರೆ.

ABOUT THE AUTHOR

...view details