ಕರ್ನಾಟಕ

karnataka

ETV Bharat / state

ಸಾಲಬಾಧೆ: ತನ್ನದೇ ಹೋಟಲ್​​ನಲ್ಲಿ ನೇಣಿಗೆ ಶರಣಾದ ವ್ಯಕ್ತಿ - ಸಾಲ ಬಾಧೆಯಿಂದ ಹೋಟೆಲ್ ಮಾಲೀಕ ನೇಣು

ಶಿವಮೊಗ್ಗದಲ್ಲಿ ಸಾಲಬಾಧೆ ತಾಳಲಾರದೆ ವ್ಯಕ್ತಿಯೋರ್ವ ತನ್ನದೇ ಹೋಟೆಲ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣಿಗೆ ಶರಣಾದ ವ್ಯಕ್ತಿ
ನೇಣಿಗೆ ಶರಣಾದ ವ್ಯಕ್ತಿ

By

Published : Dec 10, 2019, 1:27 PM IST

ಶಿವಮೊಗ್ಗ:ಸಾಲಬಾಧೆಯಿಂದ ಹೋಟೆಲ್ ಮಾಲೀಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ.

ರವಿಕುಮಾರ್ (32) ಹೋಟೆಲ್ ನಡೆಸುತ್ತಿದ್ದ. ಸಾಲಬಾಧೆ ತಾಳಲಾರದೆ ತನ್ನದೇ ಹೋಟೆಲ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಅವಿವಾಹಿತ. ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ಎನ್ನಲಾಗಿದೆ.

ಸ್ಥಳಕ್ಕೆ ಜೋಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details