ಕರ್ನಾಟಕ

karnataka

ETV Bharat / state

ತಾಯಿಯ ಶವ ಸಂಸ್ಕಾರಕ್ಕೆ ಜಾಗ ನೀಡಲು ಆಗ್ರಹಿಸಿ ತಂದೆ ಮನೆ ಮುಂದೆ ಪುತ್ರನ ಪ್ರತಿಭಟನೆ! - ಶಿವಮೊಗ್ಗ ಲೆಟೆಸ್ಟ್ ನ್ಯೂಸ್

ನಾಗರತ್ನ ಎಂಬುವರು 10 ವರ್ಷಗಳ ಹಿಂದೆ ಪತಿ ನಾಗರಾಜ್ ಹಾಗೂ ಮಗ ಗಣೇಶನನ್ನು ಬಿಟ್ಟು ಹೋಗಿದ್ದು, ನಿನ್ನೆ ಕೊನೆಯುಸಿರೆಳೆದಿದ್ದಾರೆ. ತಾಯಿಯ ಅಂತ್ಯಕ್ರಿಯೆ ನಮ್ಮದೇ ಜಾಗದಲ್ಲಿ ಮಾಡಬೇಕೆಂದು ನಿನ್ನೆ ಪುತ್ರ ಗಣೇಶ್​ ​ಪಟ್ಟು ಹಿಡಿದಿದ್ದ. ನಂತರ ರಿಪ್ಪನಪೇಟೆ ಪೊಲೀಸರು ಮಧ್ಯ ಪ್ರವೇಶಿಸಿ, ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

son protest in front of fathers house demanding a site for mothers funeral
ತಾಯಿಯ ಶವ ಸಂಸ್ಕಾರ ಜಾಗಕ್ಕೆ ಆಗ್ರಹಿಸಿ ತಂದೆ ಮನೆ ಮುಂದೆ ಪುತ್ರನ ಪ್ರತಿಭಟನೆ!

By

Published : Oct 17, 2020, 2:10 PM IST

ಶಿವಮೊಗ್ಗ:ತನ್ನ ತಾಯಿಯ ಶವ ಸಂಸ್ಕಾರ ಮಾಡಲು ಜಮೀನಿನಲ್ಲಿ ಜಾಗ ನೀಡಬೇಕೆಂದು ಆಗ್ರಹಿಸಿ ಮಗ ತನ್ನ ತಂದೆ ಮನೆ ಮುಂದೆ ರಾತ್ರಿಯಿಡೀ ತಾಯಿಯ ಶವದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಹೊಸನಗರ ತಾಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಡೆದಿದೆ.

ಯಡಗುಡ್ಡೆ ಗ್ರಾಮದ ನಾಗರಾಜ್​​ ಎಂಬುವರ ಮೊದಲ ಪತ್ನಿ ನಾಗರತ್ನ (50) ಕ್ಯಾನ್ಸರ್​ನಿಂದ ಮೃತರಾಗಿದ್ದಾರೆ. ಇವರ ಶವ ಸಂಸ್ಕಾರಕ್ಕೆ ಪುತ್ರ ತಮ್ಮ ಜಮೀನಿನಲ್ಲೇ ಜಾಗ ನೀಡಿ ಎಂದಿದ್ದು, ತಂದೆ ನಾಗರಾಜ್ ಒಪ್ಪಲಿಲ್ಲ. ಹಾಗಾಗಿ ಮಗ ಗಣೇಶ್​​ ತಾಯಿಯ ಶವದೊಂದಿಗೆ ತಂದೆ ಮನೆ ಮುಂದೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ‌.

ತಾಯಿಯ ಶವ ಸಂಸ್ಕಾರಕ್ಕೆ ಜಾಗ ನೀಡಲು ಆಗ್ರಹಿಸಿ ತಂದೆ ಮನೆ ಮುಂದೆ ಪುತ್ರನ ಪ್ರತಿಭಟನೆ

ನಾಗರತ್ನ 10 ವರ್ಷಗಳ ಹಿಂದೆ ಪತಿ ನಾಗರಾಜ್ ಹಾಗೂ ಮಗ ಗಣೇಶನನ್ನು ಬಿಟ್ಟು ಹೋಗಿದ್ದು, ನಾಗರಾಜ್ ಎರಡನೇ ಮದುವೆಯಾಗಿದ್ದರು. ನಾಗರತ್ನ ನಿನ್ನೆ ಕ್ಯಾನ್ಸರ್​ನಿಂದ ಮೃತರಾಗಿದ್ದಾರೆ. ಇದರಿಂದ ಮಗ ಗಣೇಶ ತನ್ನ ತಾಯಿಯನ್ನು ತಮ್ಮದೇ ಜಮೀನಿನಲ್ಲಿ ಶವ ಸಂಸ್ಕಾರ ನಡೆಸಬೇಕೆಂದು ಕೇಳಿಕೊಂಡಾಗ ತಂದೆ ಒಪ್ಪಿಗೆ ನೀಡಿಲ್ಲ. ಪರಿಣಾಮ ತಾಯಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾನೆ. ನಂತರ ರಿಪ್ಪನಪೇಟೆ ಪೊಲೀಸರು ಮಧ್ಯ ಪ್ರವೇಶಿಸಿ, ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details