ಶಿವಮೊಗ್ಗ: ಲಾಕ್ಡೌನ್ನಿಂದ ಜಿಲ್ಲೆಯ ವಾಣಿಜ್ಯ ಕೇಂದ್ರ ವ್ಯಾಪಾರ ವಹಿವಾಟು ಇಲ್ಲದೆ ತತ್ತರಿಸಿತ್ತು. ಹಾಗಾಗಿ ಇಲ್ಲಿನ ವ್ಯಾಪಾರಸ್ಥರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟಿದೆ.
ಶಿವಮೊಗ್ಗ ಗಾಂಧಿ ಬಜಾರ್ನಲ್ಲಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುಮತಿ - ಲಾಕ್ಡೌನ್ನಿಂದ ತತ್ತರಿಸಿದ್ದ ಶಿವಮೊಗ್ಗ
ಶಿವಮೊಗ್ಗದಲ್ಲಿ ಲಾಕ್ಡೌನ್ನಿಂದ ಜಿಲ್ಲೆಯ ವಾಣಿಜ್ಯ ಕೇಂದ್ರ ವ್ಯಾಪಾರ ವಹಿವಾಟು ಇಲ್ಲದೆ ತತ್ತರಿಸಿತ್ತು. ಹಾಗಾಗಿ ಇಲ್ಲಿನ ವ್ಯಾಪಾರಸ್ಥರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟಿದೆ.
ಗಾಂಧಿ ಬಜಾರ್
ಈ ಮೊದಲು ಲಾಕ್ಡೌನ್ ನಡುವೆ ಕೆಲವು ಬಾರಿ ಮಾತ್ರ ಷರತ್ತುಬದ್ದ ಅನುಮತಿ ನೀಡಲಾಗಿತ್ತು. ಇದರಿಂದ ವ್ಯಾಪಾರಿಗಳಿಗೆ ಭಾರಿ ನಷ್ಟವಾಗಿತ್ತು. ಇದರಿಂದ ವ್ಯಾಪಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕಷ್ಟ ಹೇಳಿಕೊಂಡ ಕಾರಣ, ಜಿಲ್ಲಾಧಿಕಾರಿಗಳು ಗಾಂಧಿ ಬಜಾರ್ ರಸ್ತೆಯ ಎಡ ಭಾಗದಲ್ಲಿ ಒಂದು ದಿನ ಹಾಗೂ ಬಲ ಭಾಗದಲ್ಲಿ ಒಂದು ದಿನ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದಾರೆ.
ದಿನಸಿ ಅಂಗಡಿಗಳ ಜೊತೆ, ಜವಳಿ, ಬಂಗಾರದ ಅಂಗಡಿ, ಮೊಬೈಲ್ ಸೇರಿದಂತೆ ಎಲ್ಲಾ ಅಂಗಡಿಗಳನ್ನು ತೆರೆಯಬಹುದಾಗಿದೆ.