ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಅರ್ಧ ದಿನ ಲಾಕ್​ಡೌನ್​ಗೆ ಕ್ಯಾರೇ ಎನ್ನದ ಜನ.. - ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣ

ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ, ವಹಿವಾಟು ಮಾಡಲು ಅವಕಾಶ ನೀಡಲಾಗಿದೆ. 2 ಗಂಟೆ ನಂತರ ಕಟ್ಟುನಿಟ್ಟಾಗಿ ಆಫ್ ಡೇ ಲಾಕ್​ಡೌನ್ ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಆದೇಶಿಸಿದ್ದರು..

dsdd
ಶಿವಮೊಗ್ಗದಲ್ಲಿ ಆಫ್ ಡೇ ಲಾಕ್​ಡೌನ್​ಗೆ ಕ್ಯಾರೆ ಎನ್ನದ ಜನ..!

By

Published : Jul 18, 2020, 8:49 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಾರಿಗೆ ತಂದಿರುವ ಆಫ್ ಡೇ ಲಾಕ್​ಡೌನ್​ಗೆ ಜನ ಕ್ಯಾರೇ ಎಂದಿಲ್ಲ.

ಅರ್ಧ ದಿನ ಲಾಕ್​ಡೌನ್‌ ಇದ್ರೂ ಜನರ ಸಂಚಾರ

ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ, ವಹಿವಾಟು ಮಾಡಲು ಅವಕಾಶ ನೀಡಲಾಗಿದೆ. 2 ಗಂಟೆ ನಂತರ ಕಟ್ಟುನಿಟ್ಟಾಗಿ ಆಫ್ ಡೇ ಲಾಕ್​ಡೌನ್ ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಆದೇಶಿಸಿದ್ದರು. ಆದರೆ, ಜನರು ಮಾತ್ರ ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಮಧ್ಯಾಹ್ನ ನಂತರ ನಗರದಲ್ಲಿ ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್​ ಮಾಡಲಾಗಿತ್ತು.

ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ ಹಾಕಲಾಗಿದೆ. ಆದರೆ, ಜನ ಅನಗತ್ಯವಾಗಿ ಓಡಾಡುತ್ತಿರುವುದು ಮಾತ್ರ ನಗರದೆಲ್ಲಡೆ ಸರ್ವೆ ಸಾಮಾನ್ಯವಾಗಿತ್ತು. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಆಫ್ ಡೇ ಲಾಕ್​ಡೌನ್ ಆದೇಶ ಸಭೆಗೆ ಮಾತ್ರ ಸೀಮಿತವಾಗಿದೆ ಎನ್ನುವಂತಾಗಿದೆ.1

ABOUT THE AUTHOR

...view details