ಶಿವಮೊಗ್ಗ: ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಉದ್ಘಾಟನೆಯಾದ ಅಟಲ್ ಟನಲ್ ನೋಡಲು ಮಲೆನಾಡಿನ 19 ವರ್ಷದ ಯುವಕ ಸೈಕಲ್ನಲ್ಲಿ ಹೊರಟಿದ್ದಾನೆ.
ಅಟಲ್ ಟನಲ್ ನೋಡಲು ಸೈಕಲ್ ಏರಿ ಹೊರಟಿದ್ದಾನೆ ಮಲೆನಾಡಿನ ಯುವಕ! - young man set out on a bicycle to see the Atal Tunnel
ನಗರದ ಸಿದ್ದೇಶ್ವರ್(19) ಎಂಬ ಯುವಕ ತಮ್ಮ ಸೈಕಲ್ನಲ್ಲಿ ಸುಮಾರು 2700 ಕಿ.ಮೀ. ಹೋಗುವ ಸಾಹಸ ಮಾಡುತ್ತಿದ್ದಾನೆ.
ನಗರದ ಸಿದ್ದೇಶ್ವರ್(19) ಎಂಬ ಯುವಕ ತಮ್ಮ ಸೈಕಲ್ನಲ್ಲಿ ಸುಮಾರು 2700 ಕಿ.ಮೀ. ಹೋಗುವ ಸಾಹಸ ಮಾಡುತ್ತಿದ್ದಾನೆ. ಅಟಲ್ ಟನಲ್ ಉದ್ಘಾಟನೆಯಾಗಿರುವುದನ್ನು ನೋಡಿದ ಸಿದ್ದೇಶ್ವರ್, ಇದೀಗ ಅದನ್ನು ಖುದ್ದು ನೋಡಲು ಸೈಕಲ್ನಲ್ಲಿ ಹೊರಟಿದ್ದಾನೆ.
ಸಿದ್ದೇಶ್ವರ್ ನಗರದ ಸೈಕಲ್ ಕ್ಲಬ್ನ ಸದಸ್ಯನಾಗಿದ್ದು, ತಾನು ಸೈಕಲ್ನಲ್ಲಿ ಹೊರಡುವ ಬಗ್ಗೆ ಸೈಕಲ್ ಕ್ಲಬ್ನವರಿಗೆ ತಿಳಿಸಿ ಹೊರಟಿದ್ದಾನೆ. ಇಂದು ನಗರದ ಕೋಟೆ ಆಂಜನೇಯ ದೇವಾಲಯದಿಂದ ಹೊರಡಲಿದ್ದಾನೆ. ಸಿದ್ದೇಶ್ವರ್ 30 ದಿನಗಳ ಕಾಲ ಹೋಗಿ ಬರಲು ಯೋಜನೆ ಹಾಕಿಕೊಂಡಿದ್ದಾನೆ. ಈ ಯುವಕನಿಗೆ ಯೂಥ್ ಹಾಸ್ಟಲ್ನ ಸ್ನೇಹಿತರಾದ ವಿಜಯ್, ಗಿರೀಶ್, ಹರೀಶ್ ಬೆಂಬಲ ನೀಡಿದ್ದಾರೆ.