ಕರ್ನಾಟಕ

karnataka

ETV Bharat / state

ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿಷೇಧ: ಡಿಸಿಗೆ ಮನವಿ ಸಲ್ಲಿಸಿದ ಕೈ ಸದಸ್ಯರು

ವಿಧಾನ ಮಂಡಲದ ಉಭಯ ಸದನಗಳಿಗೆ ಖಾಸಗಿ ಮಾಧ್ಯಮಗಳ ಪ್ರವೇಶ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಧಾನ ಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿಷೇಧ

By

Published : Oct 11, 2019, 10:44 AM IST

ಶಿವಮೊಗ್ಗ:ವಿಧಾನಮಂಡಲದ ಉಭಯ ಸದನಗಳಿಗೆ ಖಾಸಗಿ ಮಾಧ್ಯಮಗಳ ಪ್ರವೇಶ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಧಾನ ಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿಷೇಧ

ಬಿಜೆಪಿ ಸರ್ಕಾರ ತಮ್ಮ ಮಂತ್ರಿಗಳ ತಪ್ಪುಗಳನ್ನು ಮುಚ್ಚಿ ಹಾಕಿ ಕೊಳ್ಳುವ ಸಲುವಾಗಿ ಮಾಧ್ಯಮಗಳನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಮಾಧ್ಯಮದವರು ಸದನದಲ್ಲಿ ಬಿಜೆಪಿಯ ಮಂತ್ರಿಗಳು‌ ಹಾಗೂ ಶಾಸಕರುಗಳು ಮಾಡುವ ಶಾಸನ ವಿರೋಧಿ ಚಟುವಟಿಕೆಗಳನ್ನು ನಡೆಸುವುದನ್ನು ಬಿತ್ತರ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಈ ಕಾರಣಕ್ಕೆ ಮಾಧ್ಯಮದವರನ್ನು ದೂರು ಇಟ್ಟಿರುವುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ದೂರವಿಟ್ಟು ಅಧಿವೇಶನ ನಡೆಸುವುದು ಎಷ್ಟು ಸರಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸದನದಲ್ಲಿ ಯಾವ ರೀತಿಯ ಚರ್ಚೆ ನಡೆಸುತ್ತಾರೆ. ನಮ್ಮ ಕ್ಷೇತ್ರದ ಪರವಾಗಿ ಏನೂ ಮಾತನಾಡುತ್ತಾರೆ ಎಂಬುದನ್ನು ನೋಡುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಮಾಧ್ಯಮಗಳು ಸದನದಲ್ಲಿನ ವರದಿಯನ್ನು ಪಾರದರ್ಶಕತೆಯಿಂದ ವರದಿ ಮಾಡುವುದನ್ನು ಬಿಜೆಪಿ ಸಹಿಸುತ್ತಿಲ್ಲ.

ಸರ್ಕಾರದ ಕ್ರಮ ನಿಜಕ್ಕೂ ಪ್ರಜಾತಂತ್ರ ವಿರೋಧಿಯಾಗಿದೆ ಈಗ ಮಾಧ್ಯಮದವರ ಮೇಲೆ ನಿರ್ಬಂಧ ಹಾಕಿರುವ ಸರ್ಕಾರ ಮುಂದೆ ಪ್ರತಿ ಪಕ್ಷ ಹಾಗೂ ಹೋರಾಟಗಾರರ ಮೇಲೆ ನಿರ್ಬಂಧ ಹಾಕದೆ ಇರುವುದಿಲ್ಲ. ಇದರಿಂದ ತಕ್ಷಣ ಮಾಧ್ಯಮದವರ ಮೇಲೆ ಹಾಕಿರುವ ನಿರ್ಬಂಧ ತೆರವು ಮಾಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರ.

ABOUT THE AUTHOR

...view details