ಶಿವಮೊಗ್ಗ : ಮೀಟರ್ ಅಳವಡಿಸದೆ, ಎಸ್ಎಂಜಿ ನಂಬರ್ ಪಡೆಯದೇ ಹಾಗು ಸೂಕ್ತ ದಾಖಲೆ ಇಲ್ಲದೆ ನಗರದಲ್ಲಿ ಸಂಚಾರ ಮಾಡುತ್ತಿದ್ದ ಬರೋಬ್ಬರಿ 50 ಆಟೋಗಳನ್ನು ಶಿವಮೊಗ್ಗ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು, 42 ಆಟೋಗಳಿಗೆ ದಂಡ ವಿಧಿಸಿದ್ದಾರೆ. ಈ ಹಿಂದೆ ನಗರದಲ್ಲಿ ಹಲವಾರು ಆಟೋಗಳು ಜಿಲ್ಲಾ ಪೊಲೀಸರ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ಸಂಚಾರ ನಡೆಸುತ್ತಿರುವ ಕುರಿತು ಅನೇಕ ದೂರುಗಳು ಬಂದಿದ್ದವು.
ಇದನ್ನೂ ಓದಿ :ರೌಡಿ ಶೀಟರ್ ಸಂತೋಷ್ ಮೃತ ದೇಹ ಮಾಗಡಿಯಲ್ಲಿ ಪತ್ತೆ.. ಪ್ರತಿಕಾರದ ಹತ್ಯೆ ಶಂಕೆ
ಹೀಗಾಗಿ ಇಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಶೈಲಜಾ, ಸಿಪಿಐ ಜಯಶ್ರೀ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ದೊಡ್ಡಮನಿ ಅವರ ನೇತೃತ್ವದಲ್ಲಿ ನಗರದ ಬಿ. ಹೆಚ್. ರಸ್ತೆ ಸೇರಿದಂತೆ ಇತರೆ ಕಡೆ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 50 ಆಟೋಗಳನ್ನು ವಶಕ್ಕೆ ಪಡೆಯಲಾಗಿತ್ತು. ನಂತರ 8 ಆಟೋದ ಮಾಲೀಕರು ತಮ್ಮ ಸೂಕ್ತ ದಾಖಲೆಗಳನ್ನು ನೀಡಿದ ಹಿನ್ನೆಲೆ 8 ಆಟೋಗಳನ್ನು ಬಿಟ್ಟು ಕಳುಹಿಸಲಾಗಿದೆ. ಇನ್ನುಳಿದ 42 ಆಟೋಗಳಿಗೆ 21 ಸಾವಿರ ರೂ. ದಂಡ ವಿಧಿಸಲಾಗಿದೆ.
ಜಮೀನು ವಿವಾದ ಕೊಲೆಯಲ್ಲಿ ಅಂತ್ಯ: ಕೊಲೆಗಾರನಿಗೆ ಜೀವಾವಧಿ ಶಿಕ್ಷೆ :ಸಹೋದರರ ನಡುವೆ ಜಮೀನು ವಿವಾದದಿಂದ ಉಂಟಾದ ಗಲಾಟೆ 2018 ರಲ್ಲಿ ಕೊಲೆ ಮೂಲಕ ಅಂತ್ಯವಾಗಿತ್ತು. ಈ ಘಟನೆಯಲ್ಲಿ ಶಿವಮೊಗ್ಗ ನಗರದ ಶರಾವತಿ ಬಡಾವಣೆಯ ರೇವಣಪ್ಪ (51) ಎಂಬುವರಿಗೂ ಅವರ ಸಹೋದರರಾದ ಪ್ರಕಾಶ, ಮಂಜಪ್ಪ, ಶಂಕರಪ್ಪ, ಮೌನೇಶ್ವರಪ್ಪ ಹಾಗೂ ಆಶಾ ಹಾಗೂ ಇತರರು ಸೇರಿಕೊಂಡು ರೇವಣಪ್ಪ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು.