ಶಿವಮೊಗ್ಗ: ಮದುವೆ ಆಗಬೇಕೆಂಬ ಹಂಬಲದೊಂದಿಗೆ ಭದ್ರಾವತಿಯ ವ್ಯಕ್ತಿಯೋರ್ವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಪತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರವೀಣ್ ಎಂಬಾತ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾನೆ. ಪ್ರವೀಣ್ ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯ ನಿವಾಸಿ ಎಂದು ಆತನ ನೀಡಿರುವ ಮನವಿ ಪತ್ರದಲ್ಲಿದೆ. ಈತ ತೋಟಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಣ್ಣಸಂಗಪ್ಪ ಪುತ್ರನಾಗಿದ್ದಾನೆ.