ಶಿವಮೊಗ್ಗ: ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಸದ್ಯಕ್ಕೆ ಅವರಿಗೆ ಯಾವುದೇ ಸ್ಥಳ ನಿಯೋಜಿಸಿಲ್ಲ. ನೂತನ ಎಸ್‌ಪಿಯಾಗಿ ಬೆಂಗಳೂರು ಸಿಐಡಿ ವಿಭಾಗದ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
ಶಿವಮೊಗ್ಗ ಎಸ್ಪಿ ಲಕ್ಷ್ಮಿ ಪ್ರಸಾದ್ ವರ್ಗಾವಣೆ.. ನೂತನ ಎಸ್ಪಿಯಾಗಿ ಮಿಥುನ್ ಕುಮಾರ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಸದ್ಯಕ್ಕೆ ಅವರಿಗೆ ಯಾವುದೇ ಸ್ಥಳ ನಿಯೋಜಿಸಿಲ್ಲ.
ಎಸ್ಪಿ ಲಕ್ಷ್ಮೀ ಪ್ರಸಾದ್ ಮತ್ತು ಮಿಥುನ್ ಕುಮಾರ್
ಲಕ್ಷ್ಮೀ ಪ್ರಸಾದ್ ಅವರು ಗಾಂಜಾ ಹಾವಳಿ, ಹರ್ಷ ಹತ್ಯೆ ಪ್ರಕರಣ, ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣ, ಈಚೆಗೆ ನಡೆದ ಶಂಕಿತ ಉಗ್ರರ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದರು. ಮೆಡಿಕಲ್ ಟೆಸ್ಟ್ ಮೂಲಕ ಗಾಂಜಾ ಸೇವನೆ ಮಾಡುವವರ ವಿರುದ್ಧ ಕಠಿಣ ಸಹ ಕ್ರಮಕೈಗೊಳ್ಳುವ ಮೂಲಕ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದರು.