ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿದ ನಂತರವೂ ರಸ್ತೆ ದುರಸ್ತಿ ಮಾಡದ ಕಾರಣ ಸ್ಥಳೀಯ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ - Shimoga latest protest news
ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿದ ನಂತರವೂ ರಸ್ತೆ ದುರಸ್ತಿ ಮಾಡದ ಕಾರಣ ಸ್ಥಳೀಯ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ವಿನೋಬನಗರದ ಶಿವನ ದೇವಾಲಯ ಮುಂಭಾಗ ಹಾಗೂ ಬೊಮ್ಮನಕಟ್ಟೆ ಕ್ರಾಸ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಯುಜಿಡಿಯನ್ನು ವಿಸ್ತರಣೆ ಮಾಡಲು ರಸ್ತೆ ಮಧ್ಯೆಯಲ್ಲಿ ಗುಂಡಿ ತೆಗೆದು ಕಾಮಗಾರಿಯನ್ನು ನಡೆಸಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ರಸ್ತೆ ಹಾಳಾಗಿದ್ದು, ಕಳೆದ ಒಂದು ತಿಂಗಳ ಕಾಮಗಾರಿ ನಂತರವೂ ರಸ್ತೆ ದುರಸ್ತಿ ಮಾಡದ ಕಾರಣ ರಸ್ತೆ ಹಾಗೂ ಅಕ್ಕ ಪಕ್ಕದಲ್ಲಿನ ಅಂಗಡಿಗಳು ಧೂಳಿನಿಂದ ಆವೃತವಾಗಿವೆ.
ಇದೇ ರಸ್ತೆಯಲ್ಲಿ ಶಿಕಾರಿಪುರ, ಸೊರಬ ಹಾಗೂ ಸಿಟಿ ಬಸ್ ಗಳು ಓಡಾಡುತ್ತವೆ. ಅಲ್ಲದೇ ಅನಧಿಕೃತ ಕಲ್ಲುಗಣಿಗಾರಿಕೆಯ ಟ್ರಾಕ್ಟರ್ ಟಿಪ್ಪರ್ಗಳು ಕೂಡ ಇಲ್ಲಿಯೇ ಸಂಚರಿಸುವುದರಿಂದ ಈ ಭಾಗದ ಜನತೆ ನರಕ ಯಾತನೆ ಅನುಭವಿಸುವಂತಾಗಿದೆ. ಅಲ್ಲದೇ ಅಕ್ಕ ಪಕ್ಕದ ಅಂಗಡಿಯವರಿಗೆ ವ್ಯಾಪಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.